ಹಾವೇರಿ:ಹಾವೇರಿಯ ನರಸೀಪುರದಲ್ಲಿ ಜನವರಿ 14ರಿಂದ ನಿಜಶರಣ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ ಜರುಗಲಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಶ್ರೀಗಳು ತಿಳಿಸಿದ್ದಾರೆ.
ಜನವರಿ 14ರಿಂದ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ : ಶಾಂತಭೀಷ್ಮ ಶ್ರೀ - ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ
ಹಾವೇರಿಯ ನರಸೀಪುರದಲ್ಲಿ ಜನವರಿ 14ರಿಂದ ನಿಜಶರಣ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ ಜರುಗಲಿದೆ.
![ಜನವರಿ 14ರಿಂದ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ : ಶಾಂತಭೀಷ್ಮ ಶ್ರೀ Ambigara Chowdayya](https://etvbharatimages.akamaized.net/etvbharat/prod-images/768-512-5439329-thumbnail-3x2-chai.jpg)
ಶಾಂತಭೀಷ್ಮ ಶ್ರೀ
ಪೂರ್ವ ಭಾವಿ ಸಭೆ ನಡೆಸಿ ಮಾತನಾಡಿದ ಶ್ರೀಗಳು, ಅಂಬಿಗರ ಚೌಡಯ್ಯನ 900ನೇ ಜಯಂತಿ ಅಂಗವಾಗಿ ವಚನಗ್ರಂಥಗಳ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಸಚಿವರು ರಾಜ್ಯದ ಪ್ರಮುಖ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಶಾಂತಭೀಷ್ಮಶ್ರೀಗಳು ತಿಳಿಸಿದರು.