ಕರ್ನಾಟಕ

karnataka

ETV Bharat / state

ಕಲಾವಿದರ ಹಾಸ್ಯ, ಕನ್ನಡದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕನ್ನಡಪ್ರೇಮಿಗಳು.. ಮನಗೆದ್ದ ಪುಸ್ತಕ ಪ್ರದರ್ಶನ ಫಲಪುಷ್ಪ ಪ್ರದರ್ಶನ - ವಿವಿಧ ತರಕಾರಿಗಳಲ್ಲಿ ಕಲಾಕೃತಿ

ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ-ವಿವಿಧ ಹಾಸ್ಯ ಕಾರ್ಯಕ್ರಮ ಆಯೋಜನೆ - ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಹಾಸ್ಯ ಕಲಾವಿದರು - ಗಂಗಾವತಿ ಪ್ರಾಣೇಶ್ ನರಸಿಂಹ್ ಜೋಷಿ ಬಸವರಾಜ್ ಮಹಾಮನೆ ಹಾಸ್ಯಗಳಿಗೆ ಮನಸೋತ ಜನ - ಚಿಲ್ಲೂರು ಬಡ್ನಿಯ ಹನುಮಂತ, ಖಾಸೀಂ ಮತ್ತು ರುಬೀನಾ ಅವರ ಕನ್ನಡದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕನ್ನಡಪ್ರೇಮಿಗಳು.... ಆಕರ್ಷಿಸಿದ ಫಲ ಪುಷ್ಪ ಪ್ರದರ್ಶನ.

Various Kannada songs from famous private channel artists
ಖ್ಯಾತ ಖಾಸಗಿ ವಾಹಿನಿಯ ಕಲಾವಿದರಿಂದ ವಿವಿಧ ಕನ್ನಡ ಹಾಡು

By

Published : Jan 7, 2023, 5:13 PM IST

Updated : Jan 7, 2023, 7:28 PM IST

ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿ: ನಗರದಲ್ಲಿ ನಡೆದ ಅಖಿಲ ಭಾರತ 86 ನೇ ಸಾಹಿತ್ಯ ಸಮ್ಮೇಳನವೂ ಎರಡನೇಯ ದಿನಕ್ಕೆ ಕಾಲಿಟ್ಟಿದೆ. ಸಮ್ಮೇಳನದಲ್ಲಿ ಎರಡನೇ ದಿನವೂ ವಿವಿಧ ಗೋಷ್ಠಿ, ಹಾಸ್ಯ ನೃತ್ಯ,ಹಾಡಿನ ಕಾರ್ಯಕ್ರಮ, ಫಲ-ಪುಷ್ಪ ಪ್ರದರ್ಶನ ಕನ್ನಡಪ್ರೇಮಿಗಳನ್ನು ಆಕರ್ಷಿಸಿದವು. ಶನಿವಾರ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಜೋಷಿ ಮತ್ತು ಬಸವರಾಜ್ ಮಹಾಮನೆ ಅವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಕನ್ನಡ ಭಾಷೆಯ ಬಗ್ಗೆ ಕಲಾವಿದ ಪ್ರಾಣೇಶ ಮಾತನಾಡಿ, ಕನ್ನಡ ಇತರ ಭಾಷೆಗಳಿಗೇನು ಕಡಿಮೆಯಿಲ್ಲ. ಇಂಥ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ ಸಂಸ್ಕೃತಿ ಬೆಳೆಸಲೂ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಉತ್ತರ ಕರ್ನಾಟಕ ಹಾಸ್ಯ ಚಟಾಕಿ ಹಾರಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಇನ್ನೊಬ್ಬ ಕಲಾವಿದ ನರಸಿಂಹ್ ಜೋಷಿ ವಿವಿಧ ಕನ್ನಡ ನಾಯಕರ ಧ್ವನಿಗಳ ಮೂಲಕ ಸಾಹಿತ್ಯಾಭಿಮಾನಿಗಳನ್ನು ರಂಜಿಸಿದರು. ಬಸವರಾಜ್ ಮಹಾಮನೆ ಅವರು, ರಾಜ್ಯದಲ್ಲಿ ಕನ್ನಡ ಎಲ್ಲೆಲ್ಲಿ ಹೇಗಿದೆ ಅನ್ನುವದನ್ನೂ ಅದರ ಅರ್ಥಮತ್ತು ಶೈಲಿಗಳನ್ನು ಅಭಿನಯ ಮೂಲಕ ಪ್ರೇಕ್ಷಕರನ್ನು ಮನಸೆಳೆದರು.

ಹರಿದು ಬಂದ ಜನಸಾಗರ: 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧ ಕಡೆಯಿಂದ ಜನಸಾಗರವೇ ಹರಿದು ಬಂದಿದೆ. ಕೇವಲ ಸಾಹಿತ್ಯ ಗೋಷ್ಠಿಗಳಲ್ಲದೇ ಸಾಂಸ್ಕೃತಿಕ ಕಾರ್ಯಕ್ರಗಳು ಕನ್ನಡಿಗರಿಗೆ ಮನರಂಜನೆಯ ರಸದೌತುಣ ಉಣಬಡಿಸಿದವು. ಅದರಲ್ಲೂ ಖ್ಯಾತ ಖಾಸಗಿ ವಾಹಿನಿಯ ಕಲಾವಿದರಾದ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿಯ ಹನುಮಂತ, ಖಾಸೀಂ ಮತ್ತು ರುಬೀನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡಾಭಿಮಾನಿಗಳು ಹನುಮಂತನ ಹಾಡಿಗೆ ಕೇಕೆ ಹಾಕಿ ಸಂಭ್ರಮಿಸಿದರು.

ಖಾಸೀಂ ಮಂಜುನಾಥನ ಹಾಡು ಕೇಳಿದಂತೆ ವೀಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿದರು. ರುಬೀನಾ ಹಾಡಿಗೆ ಸಹ ವೀಕ್ಷಕರು ಕುಣಿದು ಕುಪ್ಪಳಿಸಿದರು. ವೇದಿಕೆ ಮೇಲೆ ಕಾಣಿಸಿಕೊಂಡ ಜಿಲ್ಲೆಯ ಕಲಾವಿದ ಹನುಮಂತ ಸ್ಥಳೀಯ ಭಾಷೆಯಲ್ಲಿ ಮಾತನಾಡಿ, ಕನ್ನಡಪ್ರೇಮಿಗಳನ್ನು ಗಮನ ಸೆಳೆದರು. ಶಿಶುನಾಳ ಶರೀಫರ್ ಕೇಳೋ ಜಾಣ ಹಾಡು ಹೇಳುವ ಮೂಲಕ ಮನರಂಜಿಸಿದರು. ರುಬೀನಾ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡುವ ಮೂಲಕ ಕನ್ನಡಪ್ರೇಮಿಗಳ ಮನಗೆದ್ದರು. ಸ್ಥಳೀಯ ಕಲಾವಿದರಿಂದ ನೃತ್ಯ,ಕೀರ್ತನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಬ್ಬದ ವಾತಾವರಣ: ಇದೇ ಪ್ರಥಮ ಬಾರಿಗೆ ಅತಿಥ್ಯ ವಹಿಸಿರುವ ಹಾವೇರಿ ನಗರದಲ್ಲೊಂತು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳು ಕನ್ನಡಾಭಿಮಾನಿಗಳು ಮನಸೆಳೆಯುತ್ತಿವೆ.

ಫಲ-ಪುಷ್ಪ ಪ್ರದರ್ಶನ: ನಗರದ ಹೊರವಲಯದ ಅಜ್ಜಯ್ಯನ ದೇವಸ್ಥಾನದ ಎದುರು 10 ಗುಂಟೆ ಜಾಗದಲ್ಲಿ ತೋಟಗಾರಿಕೆ ಇಲಾಖೆಯು 20 ರಿಂದ 25 ತರಹೇವಾರಿ ಹೂವುಗಳಿಂದ ಸುಮಾರು 4 ರಿಂದ 5 ಲಕ್ಷ ಹೂಗಳಿಂದ ಕಲಾಕೃತಿಗಳನ್ನು ಮಾಡಿದೆ. ಅಲ್ಲದೇ 6 ಅಡಿ ಎತ್ತರದ ಸಿರಿಧಾನ್ಯದ ಭುವನೇಶ್ವರಿ ದೇವಿ ಕಲಾಕೃತಿ ಕಣ್ಮನ ಸೆಳೆಯುತ್ತಿದೆ. ಶಾವಿಗೆ ಹಾಗೂ ಕಲ್ಲಂಗಡಿ ಹಣ್ಣಿನಿಂದ ತಯಾರಿಸಿದ ಪುನೀತ್‌ ರಾಜಕುಮಾರ್‌ ಅವರ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 4 ಕೆ.ಜಿ ಏಲಕ್ಕಿ ಬಳಸಿ ಗಣೇಶ ಮೂರ್ತಿಯನ್ನು ಮಾಡಲಾಗಿದೆ.

ವಿವಿಧ ತರಕಾರಿಗಳಲ್ಲಿ ಕಲಾಕೃತಿ: ಕಲ್ಲಂಗಡಿ ಹಣ್ಣಿನಿಂದ ನವಿಲು, ಶಿವಲಿಂಗ, ಪ್ರಧಾನಿ ಮೋದಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,ಮೊಲ, ತಬಲ, ಬಾತುಕೋಳಿ, ಗಂಟೆ ಹಾಗೂ ಹಗಲಕಾಯಿಯಲ್ಲಿ ಡೈನೋಸಾರ್ ಮತ್ತು ಮೊಸಳೆ, ಮೂಲಂಗಿಯಲ್ಲಿ ಗರುಡ ಪಕ್ಷಿ ಮತ್ತು ನವಿಲು ಕುಬ್ಬಳ ಕಾಯಿಲ್ಲಿ ಗಿಟಾರ್‌, ತಬಲ, ಟೆಡ್ಡಿಬೇರ್, ಚೋಟಾ ಭೀಮ್ ಕುಟುಂಬ ಹಾಗೂ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ.

ಸರ್ವಜ್ಞನ ಮಂಟಪ:ಈರುಳ್ಳಿ, ಸೌತೆಕಾಯಿ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಆಲೂಗಡ್ಡೆ ಹಾಗೂ ಕಿತ್ತಲೆ, ಬಾಳೆ ಹಣ್ಣು, ಸೇಬು ಸೇರಿದಂತೆ ವಿವಿಧ ಹಣ್ಣಗಳಿಂದ ಸುಂದರವಾದ ಮಂಟಪವನ್ನು ಮಾಡಲಾಗಿದೆ. ಅದರೊಳಗೆ ಸರ್ವಜ್ಞ ಮೂರ್ತಿಯನ್ನು ಒಣ ದ್ರಾಕ್ಷಿಯಿಂದ ಮಾಡಿದ್ದು ವಿಶೇಷವಾಗಿದೆ. ಕುಲದ ಮೂಲವೇನು ಬಲ್ಲಿರೇನಯ್ಯ ಎಂದು ಕೇಳಿದ ಕನಕದಾಸರ ಮತ್ತು ಭಾವೈಕ್ಯದ ಗಾನ ಮೊಳಗಿಸಿದ ಶಿಶುನಾಳ ಶರೀಫಜ್ಜ ಹಾಗೂ ಜನಸಮುದಾಯದ ವಿವೇಕ ತಿದ್ದಿ ಸರ್ವಜ್ಞನ ಕಲಾಕೃತಿಗಳು ಫಲ- ಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಇದನ್ನೂಓದಿ:ರಾಷ್ಟ್ರೀಯ ಯುವ ಜನೋತ್ಸವ ಲಾಂಛನ ಬಿಡುಗಡೆ: ವರ್ಚುವಲ್ ಮೂಲಕ ಸಿಎಂ, ಕೇಂದ್ರ ಸಚಿವರು ಭಾಗಿ

Last Updated : Jan 7, 2023, 7:28 PM IST

For All Latest Updates

TAGGED:

ABOUT THE AUTHOR

...view details