ಹಾವೇರಿ:ನವೀನ್ ನಾಲ್ಕನೇ ವರ್ಷದ ಮೆಡಿಕಲ್ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. ಯುದ್ಧದ ಗಂಭೀರತೆ ಅಲ್ಲಿ ಜಾಸ್ತಿ ಇದೆ. ಹಾಗಾಗಿ ಪಾರ್ಥಿವ ಶರೀರ ತರಲು ಸಮಸ್ಯೆ ಆಗ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತಕ್ಷಣ ಅವರ ಪಾರ್ಥಿವ ಶರೀರ ತರೋಕೆ ತುಂಬಾ ಸಮಸ್ಯೆ ಆಗ್ತಿದೆ. ಪ್ರಧಾನಿ ಮೋದಿಜೀಯವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಮೃತದೇಹವನ್ನು ತರುವ ಚಿಂತನೆ ನಡೆದಿದೆ. ಪಾರ್ಥಿವ ಶರೀರದ ಮುಖ ನೋಡಬೇಕು ಅನ್ನೋದು ತಂದೆ- ತಾಯಿಯ ಬಯಕೆಯಾಗಿದೆ. ಪ್ರಧಾನಿ ಜೊತೆ ನಾನು, ಸಿಎಂ ಬೊಮ್ಮಾಯಿಯವರು ಮಾತನಾಡಿದ್ದೇವೆ ಎಂದರು.