ಕರ್ನಾಟಕ

karnataka

ETV Bharat / state

ಪ್ರತಿ ಕಂಬದಲ್ಲೂ ಕವಿ, ಸಾಹಿತಿಗಳ ಚಿತ್ರಣ.. 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆದ ಹುಕ್ಕೇರಿಮಠ

ಸೋಮವಾರದಿಂದ ಆರಂಭವಾಗುವ ಹುಕ್ಕೇರಿಮಠದ ಜಾತ್ರೆ- ಮಠದಲ್ಲಿರುವ ಪ್ರತಿ ಕಂಬದಲ್ಲಿ ಕನ್ನಡ ಸಾಹಿತಿಗಳ ಭಾವಚಿತ್ರ ಅಳವಡಿಕೆ- ಮಠಾಧೀಶರ ಕನ್ನಡ ಪ್ರೇಮಕ್ಕೆ ಎಲ್ಲರ ಮೆಚ್ಚುಗೆ.

akhila-bharata-kannada-sahitya-sammelana-2023
ಹಾವೇರಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನಡಿ ಬರೆದ ಹುಕ್ಕೇರಿಮಠ

By

Published : Jan 1, 2023, 7:09 PM IST

Updated : Jan 1, 2023, 9:33 PM IST

ಪ್ರತಿ ಕಂಬದಲ್ಲೂ ಕವಿ, ಸಾಹಿತಿಗಳ ಚಿತ್ರಣ.. 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆದ ಹುಕ್ಕೇರಿಮಠ

ಹಾವೇರಿ: ನಗರದಲ್ಲಿ ಇದೇ ಜನವರಿ 6,7 ಮತ್ತು 8 ರಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದ್ದು. ಮೂರು ದಿನಗಳ ಕಾಲ ನಡೆಯುವ ಅಕ್ಷರ ಜಾತ್ರೆಗೆ ಹಾವೇರಿಯ ಹುಕ್ಕೇರಿಮಠ ಕನ್ನಡ ಮಯವಾಗಿ ಕಂಗೊಳಿಸುತ್ತಿದೆ.

ಉತ್ತರ ಕರ್ನಾಟಕದ ಆರಂಭಿಕ ಜಾತ್ರೆಗಳಲ್ಲಿ ಒಂದಾಗಿರುವ ಹಾವೇರಿ ಹುಕ್ಕೇರಿಮಠದ ಜಾತ್ರೆ ನಡೆಯುತ್ತಿದೆ. ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಹುಕ್ಕೇರಿಮಠದಲ್ಲಿ ಇರುವ ಪ್ರತಿ ಕಂಬವು ಇದೀಗ ಕನ್ನಡ ಸಾಹಿತಿಗಳು, ದಾರ್ಶಿನಿಕರನ್ನು ಮತ್ತು ಸಂತರ ಭಾವಚಿತ್ರಗಳನ್ನು ಹೊತ್ತು ನಿಂತಿವೆ.

ಮಠದಲ್ಲಿ ಸುಮಾರು 16 ಕಂಬಗಳಿಗೆ ನಾಡಿನ ಗಣ್ಯರ ಭಾವಚಿತ್ರಗಳನ್ನು ಹಾಕುವ ಮೂಲಕ ಹುಕ್ಕೇರಿ ಮಠದ ಮಠಾಧೀಶರಾದ ಸದಾಶಿವಶ್ರೀಗಳು ಕನ್ನಡಪ್ರೇಮ ಮೆರೆದಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ಶಿವರಾಮ ಕಾರಂತ, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ, ವಿ.ಕೃ ಗೋಕಾಕ್, ಯು.ಆರ್ ಅನಂತಮೂರ್ತಿ, ಗಿರೀಶ ಕಾರ್ನಾಡ್​, ಚಂದ್ರಶೇಖರ್ ಕಂಬಾರ ಅವರ ಭಾವಚಿತ್ರಗಳ ಜೊತೆಗೆ ಅವರ ಬರೆದ ಕವಿತೆಗಳ ಸಾಲುಗಳನ್ನು ಸಹ ಬರೆಯಲಾಗಿದೆ.

ರಾಷ್ಟ್ರಕವಿಗಳಾದ ಗೋವಿಂದ ಪೈ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ, ಮಂಕುತಿಮ್ಮನ ಕಗ್ಗದ ಡಿ.ವಿ.ಜಿ. ಆಲೂರು ವೆಂಕಟರಾಯರ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. ಜೊತೆಗೆ ಹಾವೇರಿ ಜಿಲ್ಲೆಯ ಮಹನೀಯರಾದ ಸರ್ವಜ್ಞ, ಕನಕದಾಸ, ಶಿಶುನಾಳ ಶರೀಫ ಅಂಬಿಗರ ಚೌಡಯ್ಯರ, ಹೊಸಮನಿ ಸಿದ್ದಪ್ಪ ಮತ್ತು ಚಂಪಾ ಭಾವಚಿತ್ರಗಳು ನಾಡಿನ ಪ್ರೇಮ ಹೆಚ್ಚಿಸುತ್ತೀವೆ.

ಸಾಹಿತಿಗಳಷ್ಟೇ ಅಲ್ಲದೆ ಕನ್ನಡ ವಚನ ಸಾಹಿತ್ಯ ರಚಿಸಿದ ಬಸವೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿ ಭಾವಚಿತ್ರಗಳು ಕನ್ನಡಿಗರಿಗೆ ಖುಷಿ ನೀಡುತ್ತವೆ, ಶಿವಯೋಗ ಮಂದಿರದ ನಿರ್ಮಾತೃ ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳ ಭಾವಚಿತ್ರಗಳು ಸಹ ಅಳವಡಿಸಲಾಗಿದ್ದು ಮಠದ ಜಾತ್ರೆಗೆ ಆಗಮಿಸುವ ಎಲ್ಲಾ ಭಕ್ತಾಧಿಗಳ ಗಮನ ಸೆಳೆಯುತ್ತವೆ.

ಸೋಮವಾರ ಹುಕ್ಕೇರಿಮಠ ಶಿವಬಸವ ಮತ್ತು ಶಿವಲಿಂಗಶ್ರೀಗಳು ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಹಾವೇರಿ ಹುಕ್ಕೇರಿಮಠದ ಪ್ರಸ್ತುತ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳುತ್ತದೆ. ಹುಕ್ಕೇರಿಮಠದ ಜಾತ್ರೆ ಮುಕ್ತಾಯವಾಗುತ್ತಿದ್ದಂತೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ. ಹೀಗಾಗಿ ಹುಕ್ಕೇರಿಮಠದ ಜಾತ್ರೆ ಅಕ್ಷರ ಜಾತ್ರೆಗೆ ಮುನ್ನುಡಿ ಬರೆಯುತ್ತಿದೆ.

ಪ್ರತಿವರ್ಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದ ಹುಕ್ಕೇರಿಮಠ ಇದೀಗ ಕವಿ, ದಾರ್ಶನಿಕ, ಗಣ್ಯವ್ಯಕ್ತಿಗಳ ಹಾಗೂ ಸಾಹಿತಿಗಳ ಮಠಾಧೀಶರ ಮತ್ತು ವಚನಕಾರರ ಭಾವಚಿತ್ರಗಳನ್ನು ಹೊತ್ತು ಕಂಗೊಳಿಸುತ್ತಿದೆ.

ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಗದ್ದುಗಿಗೆ ವಿಶೇಷವಾದ ಅಲಂಕಾರ ಮಾಡಲಾಗಿದ್ದು, ಮಠಕ್ಕೆ ಆಗಮಿಸುವ ಭಕ್ತರು ಉಭಯಶ್ರೀಗಳ ಗದ್ದುಗಿಗೆ ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮಠಾಧೀಶರಾಗಿರುವ ಸದಾಶಿವ ಶ್ರೀಗಳ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಮಠದ ಈ ಸಾಹಿತ್ಯಾಭಿಮಾನಿ ಮತ್ತು ಕನ್ನಡಾಭಿಮಾನ ಭಕ್ತಾಧಿಗಳಿಗೆ ಸಂತಸ ತಂದಿದೆ.

ಮಧುಮಗಳಂತೆ ಸಿಂಗಾರಗೊಳ್ಳುತ್ತಿರುವ ಹಾವೇರಿ:ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಹಾವೇರಿ ನಗರ ಅಲಂಕಾದಿಂದ ಕಂಗೊಳಿಸುತ್ತಿದೆ. ನಗರದ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ವಿವಿಧ ಕಲಾಕೃತಿಗಳು, ನಾಡಿನ ಹೆಸರಾಂತ ಸಾಹಿತಿಗಳು, ಗಣ್ಯರುಗಳ ಚಿತ್ರಗಳನ್ನು ಗೋಡೆಯ ಮೇಲೆ ಬಿಡಿಸಲಾಗಿದೆ.

ರಥದ ಮೂಲಕ ಸಮ್ಮೇಳನಕ್ಕೆ ಆಹ್ವಾನ: ಕನ್ನಡದ ನುಡಿ ಜಾತ್ರೆಯನ್ನು ಐತಿಹಾಸಿಕ ದಾಖಲೆನ್ನಾಗಿಸುವ ಉದ್ದೇಶದಿಂದ, ಕನ್ನಡ ರಥವನ್ನು ನಾಡಿನಾದ್ಯಂತ ಸಂಚರಿಸುವ ಮೂಲಕ ಕನ್ನಡಿಗರನ್ನು ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ : ಮಹಿಳೆಯರ ಸೇವೆಗೆ ಮಹಿಳಾ ಸ್ತ್ರೀ ಶಕ್ತಿ ಸಮಿತಿ

Last Updated : Jan 1, 2023, 9:33 PM IST

ABOUT THE AUTHOR

...view details