ಹಾನಗಲ್:ಗೋವಿನ ಜೋಳ ಬೆಳೆಯುವ ರೈತರು ಪೈರಿನ ಮೇಲ್ಭಾಗವನ್ನ ಕಟಾವ್ ಮಾಡಿ ತೆನೆಯ ಕಾಳುಗಳು ಕೆಡದಂತೆ ನೋಡಿಕೊಳ್ಳಿ ಎಂದು ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಮನವಿ ಮಾಡಿದ್ದಾರೆ.
ಜೋಳದ ತೆನೆಯ ಕಾಳುಗಳು ಕೆಡದಂತೆ ನೋಡಿಕೊಳ್ಳಿ: ದೇವೇಂದ್ರಪ್ಪ ಮನವಿ - Agriculture Assistant Director Devendrappa
ತುಂತುರು ಮಳೆ ಆಗಾಗ ಬರುವುದರಿಂದ ಗೋವಿನ ಜೋಳದ ತೆನೆಗಳ ಕಾಳು ಕೆಟ್ಟು ಹೋಗುವ ಸಂಭವವಿರುತ್ತದೆ. ಆದ್ದರಿಂದ ದಯವಿಟ್ಟು ತಾಲೂಕಿನ ಗೋವಿನ ಜೋಳದ ಬೆಳೆಗಾರರು ಪೈರಿನ ಮೇಲ್ಭಾಗದ ಚಂಡಿಯನ್ನ ಕಟಾವು ಮಾಡಿ ಎಂದು ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ
ತಾಲೂಕಿನಲ್ಲಿ ಅತೀ ಹೆಚ್ಚು ರೈತರು ಗೋವಿನ ಜೋಳ ಬೆಳೆಯುತಿದ್ದಾರೆ. ತುಂತುರು ಮಳೆ ಆಗಾಗ ಬರುವುದರಿಂದ ಗೋವಿನ ಜೋಳದ ತೆನೆಗಳ ಕಾಳು ಕೆಟ್ಟು ಹೋಗುವ ಸಂಭವವಿರುತ್ತದೆ. ಆದ್ದರಿಂದ ದಯವಿಟ್ಟು ತಾಲೂಕಿನ ಗೋವಿನ ಜೋಳದ ಬೆಳೆಗಾರರು ಪೈರಿನ ಮೇಲ್ಭಾಗದ ಚಂಡಿಯನ್ನ ಕಟಾವು ಮಾಡಿ. ಬಿಸಿಲು ಶುರುವಾದ ನಂತರ ತೆನೆಗಳನ್ನ ಕಟಾವ್ ಮಾಡಿ. ಇದರಿಂದ ಕಾಳುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.