ಹಾವೇರಿ: ತಿಥಿ ಸಿನಿಮಾದ ನಟಿ ಪೂಜಾ ಹಾವೇರಿ ಜಿಲ್ಲೆಯ ರಾಣೆಬೆನ್ನೂರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಿಥಿ ಸಿನಿಮಾದಲ್ಲಿ ಕಾವೇರಿ ಪಾತ್ರದಲ್ಲಿ ಮಿಂಚಿದ್ದ ನಟಿ ಪೂಜಾ, ಸಾಫ್ಟವೇರ್ ಇಂಜಿನಿಯರ್ ಪ್ರೇಮ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಸದ್ದಿಲ್ಲದೆ ಎಂಗೇಜ್ ಆದ ತಿಥಿ ಸಿನಿಮಾದ ನಟಿ ಪೂಜಾ!
ತಿಥಿ ಸಿನಿಮಾದಲ್ಲಿ ಕಾವೇರಿ ಪಾತ್ರದಲ್ಲಿ ಮಿಂಚಿದ್ದ ನಟಿ ಪೂಜಾ ಸಾಫ್ಟವೇರ್ ಇಂಜಿನಿಯರ್ ಪ್ರೇಮ್ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ..
ಸದ್ದಿಲ್ಲದೆ ಎಂಗೇಜ್ ಆದ ತಿಥಿ ಸಿನಿಮಾದ ನಟಿ ಪೂಜಾ
ಆಪ್ತರು, ಸ್ನೇಹಿತರು, ಕುಟುಂಬದ ಸಮ್ಮುಖದಲ್ಲಿ ನಟಿ ಪೂಜಾ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಡಿಸೆಂಬರ್ 3 ಮತ್ತು 4ರಂದು ವಿವಾಹ ಕಾರ್ಯ ಜರುಗಲಿದೆ. ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಪಡೆದಿದ್ದ ಪೂಜಾ, ದಾರಿ ಯಾವುದಯ್ಯ ವೈಕುಂಠಕ್ಕೆ ಸೇರಿ ಹಲವು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.