ಹಾನಗಲ್: 48 ವರ್ಷದ ಮಹಿಳೆಯ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿನಲ್ಲಿ ನಡೆದಿದೆ.
ಹಾನಗಲ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಯುವಕ ಅಂದರ್ - haveri crime news'
ನವೆಂಬರ್ 1 ರಂದು ಹಾನಗಲ್ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾನಗಲ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಯುವಕ
ಮೃತ ಮಹಿಳೆ ದಾವಣೆಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದವರಾಗಿದ್ದಾರೆ. ನವೆಂಬರ್ 1ರಂದು ಮಹಿಳೆಯನ್ನ ಬೈಕ್ ಮೇಲೆ ಕರೆದುಕೊಂಡು ಬಂದಿದ್ದ ಆರೋಪಿ ಯಲ್ಲಪ್ಪ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದ ಎನ್ನಲಾಗ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆಡೂರು ಠಾಣೆ ಪೊಲೀಸರು ಘಟನೆ ಬಳಿಕ ಪರಾರಿಯಾಗಿದ್ದ ಯಲ್ಲಪ್ಪನನ್ನು ಇದೀಗ ಬಂಧಿಸಿದ್ದಾರೆ.
Last Updated : Nov 8, 2020, 12:07 PM IST