ಹಾವೇರಿ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಖಾಸಗಿ ಬಸ್ ನಿಂತಲ್ಲೇ ಧಗ ಧಗನೆ ಹೊತ್ತಿ ಉರಿದಿರುವ ಘಟನೆ ನಗರದ ಮುರಘರಾಜೇಂದ್ರ ಮಠದ ಬಳಿ ನಡೆದಿದೆ.
ಆಕಸ್ಮಿಕ ಬೆಂಕಿ
ಹಾವೇರಿ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಖಾಸಗಿ ಬಸ್ ನಿಂತಲ್ಲೇ ಧಗ ಧಗನೆ ಹೊತ್ತಿ ಉರಿದಿರುವ ಘಟನೆ ನಗರದ ಮುರಘರಾಜೇಂದ್ರ ಮಠದ ಬಳಿ ನಡೆದಿದೆ.
ಬೆಳಿಗ್ಗೆ ಹಾವೇರಿಗೆ ಬಂದು ನಿಂತಿದ್ದ ಸ್ಲೀಪರ್ ಕೋಚ್ ಬಸ್ ಎಂದು ತಿಳಿದು ಬಂದಿದ್ದು, ಬಸ್ನಲ್ಲಿ ಪ್ರಯಾಣಿಕರು ಇಲ್ಲದ ಪರಿಣಾಮ ಭಾರಿ ಅನಾಹುತ ತಪ್ಪಿದಂತಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.