ಕರ್ನಾಟಕ

karnataka

ETV Bharat / state

ಪಾಕ್ ಪರ ಘೋಷಣೆ: ಅಮೂಲ್ಯ ಲಿಯೋನಳ ಗಡಿಪಾರಿಗೆ ಆಗ್ರಹಿಸಿ ಎಬಿವಿಪಿ ಧರಣಿ - ಅಮೂಲ್ಯ ಲಿಯೋನ

ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಅಮೂಲ್ಯ ಲಿಯೋನ ವಿರುದ್ಧ ಘೋಷಣೆ ಕೂಗಿದರು.

ABVP protest
ಎಬಿವಿಪಿ ಧರಣಿ

By

Published : Feb 23, 2020, 5:29 AM IST

ರಾಣೆಬೆನ್ನೂರ: ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ 'ಪಾಕಿಸ್ತಾನ ಜಿಂದಬಾದ್' ಎಂದು ಕೂಗಿದ್ದ ಅಮೂಲ್ಯ ಲಿಯೋನ್ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಣೆಬೆನ್ನೂರಿನಲ್ಲಿ ಅಮೂಲ್ಯ ಲಿಯೋನಳ ಗಡಿಪಾರಿಗೆ ಆಗ್ರಹಿಸಿ ಎಬಿವಿಪಿ ಧರಣಿ

ಎಬಿವಿಪಿ ಕಾರ್ಯಕರ್ತರೊಬ್ಬರು ಮಾತನಾಡಿ, ಅಮೂಲ್ಯ ಇರುವುದು ಭಾರತದಲ್ಲಿ. ಇಲ್ಲಿನ ಅನ್ನವನ್ನು ತಿಂದು ಪಾಕ್​ ಪರ ಘೋಷಣೆ ಕೂಗಿದ್ದಾಳೆ. ಇದು ಖಂಡನೀಯವಾದ ನಡೆ. ಕೂಡಲೇ ಅಮೂಲ್ಯ ಲಿಯೋಳನ್ನು ಭಾರತದಿಂದ ‌ಗಡಿಪಾರು ಮಾಡಬೇಕು ಎಂದು ಹೇಳಿದರು.

ಅಮೂಲ್ಯಳನ್ನು ಗಡಿಪಾರು ಮಾಡುವಂತೆ ಪೊಲೀಸರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ABOUT THE AUTHOR

...view details