ಹಾವೇರಿ:ಯುವಕನೋರ್ವ ನೇಣಿಗೆ ಶರಣಾದ ಘಟನೆ ಹಾವೇರಿ ಸಮೀಪದ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲೇ ನೇಣಿಗೆ ಶರಣಾದ ಯುವಕ - ಹಾವೇರಿ ಗ್ರಾಮಾಂತರ ಪೊಲೀಸರು
ಬೇಕರಿಗಳಿಗೆ ತಿನಿಸುಗಳನ್ನು ಪೂರೈಸುತ್ತಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಹಾವೇರಿ ಸಮೀಪದ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲೇ ನೇಣಿಗೆ ಶರಣಾದ ಯುವಕ...ಕಾರಣ?
19 ವರ್ಷ ವಯಸ್ಸಿನ ಮನೋಜ್ ಬೆನಗೇರಿ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೋಜ್ ನೇಣಿಗೆ ಶರಣಾಗಿದ್ದಾನೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಕರಿಗಳಿಗೆ ತಿನಿಸುಗಳ ಪೂರೈಸುತ್ತಿದ್ದ ಮನೋಜ್ ಸಾವಿಗೆ ಆತ ಮಾಡಿಕೊಂಡಿದ್ದ ಅಧಿಕ ಸಾಲವೇ ಕಾರಣ ಎಂದು ಶಂಕಿಸಲಾಗಿದೆ. ಇನ್ನು ಈ ಕುರಿತಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.