ಹಾವೇರಿ: ಕೊಬ್ಬರಿ ಹೋರಿ ಹಬ್ಬದಲ್ಲಿ ಹೋರಿ ಗುದ್ದಿ ಯುವಕ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿರಾಕರಣೆ ನಡುವೆಯೂ ಹೋರಿ ಹಬ್ಬ: ದಾಳಿಗೆ ಯುವಕ ಬಲಿ - haveri news
ಹೋರಿ ಹಬ್ಬದಲ್ಲಿ ಈ ದುರ್ಘಟನೆ ನಡೆದಿದೆ. ಯುವಕ ಸಾಅವಿಗೀಡಾಗುತ್ತಿದ್ದಂತೆ ಹೋರಿ ಹಬ್ಬವನ್ನ ಬಂದ್ ಮಾಡಲಾಗಿದೆ.
ದಾಳಿಗೆ ಯುವಕ ಬಲಿ
ಮೃತ ಯುವಕನನ್ನ ಚಂದ್ರು ಈರಕ್ಕನವರ (21) ಎಂದು ಗುರ್ತಿಸಲಾಗಿದೆ. ಮೃತ ಚಂದ್ರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ನಿವಾಸಿಯಾಗಿದ್ದಾನೆ.
ಪೊಲೀಸ್ ಇಲಾಖೆಯ ಅನುಮತಿ ನಿರಾಕರಣೆ ನಡುವೆಯೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಇವತ್ತು ಕೊಬ್ಬರಿ ಹೋರಿ ಓಡಿಸೋ ಸ್ಪರ್ಧೆ ಆಯೋಜಿಸಲಾಗಿತ್ತು. ಹೋರಿ ಹಬ್ಬದಲ್ಲಿ ಈ ದುರ್ಘಟನೆ ನಡೆದಿದೆ. ಯುವಕ ಸಾವಿಗೀಡಾಗುತ್ತಿದ್ದಂತೆ ಹೋರಿ ಹಬ್ಬವನ್ನ ಬಂದ್ ಮಾಡಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.