ಹಾವೇರಿ:ಮನೆ ಕುಸಿದು ಬಿದ್ದು ಓರ್ವ ಮಹಿಳೆ ಮತ್ತು ಎರಡು ಎತ್ತುಗಳು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕುರುಬರಮಲ್ಲೂರ ಗ್ರಾಮದಲ್ಲಿ ನಡೆದಿದೆ.
ಮನೆ ಕುಸಿದು ಬಿದ್ದು ಓರ್ವ ಮಹಿಳೆ ಮತ್ತು ಎರಡು ಎತ್ತುಗಳಿಗೆ ಗಾಯ.. - ಸವಣೂರು ತಾಲೂಕಿನ ಕುರುಬರಮಲ್ಲೂರ ಗ್ರಾಮ
ಮನೆ ಕುಸಿದು ಬಿದ್ದು ಓರ್ವ ಮಹಿಳೆ ಮತ್ತು ಎರಡು ಎತ್ತುಗಳು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಮನೆ ಕುಸಿದು ಬಿದ್ದು ಓರ್ವ ಮಹಿಳೆgಎ ಗಾಯ
ಮನೆಯಲ್ಲಿದ್ದ ಶಾಂತವ್ವ ಬಡಿಗೇರ(40) ಎಂಬ ಮಹಿಳೆಯ ತಲೆಗೆ ಏಟು ಬಿದ್ದಿದೆ. ಗಾಯಾಳು ಮಹಿಳೆಗೆ ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಕಳೆದ ತಿಂಗಳು ಸಂಭವಿಸಿದ ಅತಿವೃಷ್ಟಿಯಿಂದ ಮನೆ ಸಂಪೂರ್ಣ ನೀರಿನಲ್ಲಿತ್ತು. ಹೀಗಾಗಿ ಇವತ್ತು ಏಕಾಏಕಿ ಮನೆ ಬಿದ್ದಿದೆ. ಮನೆಯ ದನದ ಕೊಟ್ಟಿಗೆಯಲ್ಲಿದ್ದ ಎತ್ತುಗಳನ್ನ ಗ್ರಾಮಸ್ಥರು ರಕ್ಷಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.