ಹಾನಗಲ್(ಹಾವೇರಿ) :ತಾಲೂಕಿನ ಹರಳಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಶಾಲೆಯಲ್ಲಿ ಮಕ್ಕಳ ಎದುರು ಪಾಠ ಬೋಧನೆ ಮಾಡುವ ಹಾಗೆ ಪಾಠ ಮಾಡಿ, ಅದರ ವಿಡಿಯೋವನ್ನು ಪೋಷಕರ ಮೊಬೈಲ್ಗೆ ವಾಟ್ಸ್ಆ್ಯಪ್ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ವಾಟ್ಸ್ಆ್ಯಪ್ ವಿಡಿಯೋ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಿರುವ ಶಿಕ್ಷಕ - ಶಿಕ್ಷಕ ನಿಂಗಪ್ಪ ಸಾಳುಂಕಿ
ಹಳ್ಳಿಯ ಮಕ್ಕಳಿಗೆ ಆನ್ಲೈನ್ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹರಳಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಿಂಗಪ್ಪ ಸಾಳುಂಕಿ ಅವರು, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪಾಠ ಆಲಿಸುವ ವ್ಯವಸ್ಥೆ ಮಾಡಿದ್ದಾರೆ..
ಕೊರೊನಾ ಬಹುತೇಕ ಎಲ್ಲಾ ವಿಭಾಗದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳ ಶೈಕ್ಷಣಿಕ ಬದುಕು ಕುಂಠಿತವಾಗಬಾರದೆಂಬ ದೃಷ್ಟಿಯಿಂದ ಸರ್ಕಾರ ಆನ್ಲೈನ್ ಪಾಠ ಆರಂಭಿಸಿದೆ. ಹಳ್ಳಿಯ ಮಕ್ಕಳಿಗೆ ಆನ್ಲೈನ್ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹರಳಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಿಂಗಪ್ಪ ಸಾಳುಂಕಿ ಅವರು, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪಾಠ ಆಲಿಸುವ ವ್ಯವಸ್ಥೆ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಎದುರು ಪಾಠ ಬೋಧನೆ ಮಾಡುವ ಹಾಗೆ ಪಾಠ ಮಾಡಿ, ಅದರ ವಿಡಿಯೋವನ್ನು ಪೋಷಕರ ಮೊಬೈಲ್ಗೆ ವಾಟ್ಸ್ಆ್ಯಪ್ ಮಾಡುತ್ತಾರೆ.
ಶಿಕ್ಷಕ ನಿಂಗಪ್ಪ ಸಾಳುಂಕಿಯವರು ಈ ರೀತಿ ಪಾಠ ಮಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿರುವುದು ಎಷ್ಟೋ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಹಕಾರಿಯಾಗಿದ್ದು, ಶಿಕ್ಷಕರ ಈ ಹೊಸ ಪ್ರಯತ್ನಕ್ಕೆ ತಾಲೂಕಿನ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.