ಕರ್ನಾಟಕ

karnataka

ETV Bharat / state

ನಿವೃತ್ತಿಯಾಗಿ ಗ್ರಾಮಕ್ಕೆ ಬಂದ ಯೋಧ... ಊರ ಹೊರಗೆ ಗುಡಿಸಲಲ್ಲಿ ಸ್ವಯಂ ಕ್ವಾರಂಟೈನ್ ಆದ ಸೈನಿಕ - ಹಾವೇರಿ ಸುದ್ದಿ

ಮನೆಯ ಸದಸ್ಯರಿಗೆ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಬಾರದು ಎಂದು ಲಿಂಗರಾಜ್ ಕ್ವಾರಂಟೈನ್ ಆಗಿದ್ದಾರೆ. ಲಿಂಗರಾಜ್​​ 2003 ರಲ್ಲಿ ಸೈನ್ಯ ಸೇರಿದ್ದು, ಆಗಸ್ಟ್ 30 ರಂದು ನಿವೃತ್ತಿಯಾಗಿದ್ದಾರೆ.

ಊರ ಹೊರಗೆ ಸ್ವಯಂ ಕ್ವಾರಂಟೈನ್ ಆದ ಸೈನಿಕ
ಊರ ಹೊರಗೆ ಸ್ವಯಂ ಕ್ವಾರಂಟೈನ್ ಆದ ಸೈನಿಕ

By

Published : Sep 4, 2020, 12:28 PM IST

ಹಾವೇರಿ: ಸೇನೆಯಿಂದ ನಿವೃತ್ತಿಯಾಗಿ ಮನೆಗೆ ಮರಳಬೇಕಾದ ಸೈನಿಕನೊಬ್ಬ ಸ್ವಯಂಪ್ರೇರಿತನಾಗಿ ಊರ ಹೊರಗೆ ಕ್ವಾರಂಟೈನ್ ಆಗಿದ್ದಾರೆ.

ತಾಲೂಕಿನ ಕೋಡಬಾಳದ ಲಿಂಗರಾಜ್ ಶಿವಸಿಂಪಿಗರ್ ಸ್ವಯಂಪ್ರೇರಿತನಾಗಿ ಕ್ವಾರಂಟೈನ್ ಆಗಿರುವ ಸೈನಿಕ. ಆಗಸ್ಟ್ 30 ರಂದು ಸೇನೆಯಿಂದ ನಿವೃತ್ತನಾಗಿ ಗ್ರಾಮಕ್ಕೆ ಮರಳಿದ ಲಿಂಗರಾಜ್‌ ಅವರಿಗೆ ಕೊರೊನಾದ ಯಾವುದೇ ರೋಗಲಕ್ಷಣಗಳಿಲ್ಲಾ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಆಗಿದ್ದಾರೆ.

ಊರ ಹೊರಗೆ ಸ್ವಯಂ ಕ್ವಾರಂಟೈನ್ ಆದ ಸೈನಿಕ

ಮನೆಯ ಸದಸ್ಯರಿಗೆ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಬಾರದು ಎಂದು ಲಿಂಗರಾಜ್ ಕ್ವಾರಂಟೈನ್ ಆಗಿದ್ದಾರೆ. ಲಿಂಗರಾಜ್​​ 2003 ರಲ್ಲಿ ಸೈನ್ಯ ಸೇರಿದ್ದು, ಆಗಸ್ಟ್ 30 ರಂದು ನಿವೃತ್ತಿಯಾಗಿದ್ದಾರೆ. ಇವರು 14 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿಸಿ ಬಳಿಕವಷ್ಟೇ ಮನೆಗೆ ತೆರಳಲಿದ್ದಾರೆ. ಅಲ್ಲಿಯವರೆಗೆ ಗ್ರಾಮದ ಹೊರಗೆ ಗುಡಿಸಲಿನಲ್ಲಿ ಇರುವ ಇಚ್ಛೆಯನ್ನ ಲಿಂಗರಾಜ್ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details