ಹಾವೇರಿ:ರಾಣೆಬೆನ್ನೂರು ತಾಲೂಕಿನ ಆಟದ ಮೈದಾನದಲ್ಲಿ ಶ್ರೀರಾಮ ಮಂದಿರದ ಆಕರ್ಷಕ ಪ್ರತಿರೂಪವನ್ನು ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ಶೇ 30ರಷ್ಟು ಅಳತೆಯ ರಾಮಮಂದಿರವನ್ನು ಪಿಒಪಿ, ಪ್ಲಾವಿಡ್, ಫೈಬರ್ ಮತ್ತು ಪ್ಲಾಸ್ಟಿಕ್ ಪೈಪ್‌ಗಳನ್ನು ಬಳಿಸಿ ನಿರ್ಮಿಸಲಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಭಕ್ತರು ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಸುಮಾರು 4 ಅಡಿ ಎತ್ತರದ ಕಟಾಂಜನದ ಮೇಲೆ ಮಂದಿರದ ರಚನೆಯಾಗಿದೆ. ಗೋಪುರದ ಕಂಬಗಳು ನೋಡಲು ಅಯೋಧ್ಯೆ ರಾಮಮಂದಿರವನ್ನೇ ಹೋಲುತ್ತಿವೆ ಎನ್ನುತ್ತಾರೆ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಎಸ್.ಬುರುಡಿಕಟ್ಟಿ.
ಗರ್ಭಗುಡಿಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ವಿದ್ಯುತ್ ದೀಪಾಲಂಕರ ಕಣ್ಮನ ಸೆಳೆಯುವಂತಿದೆ. ಭಕ್ತರು ಮಂದಿರದ ಬಳಿ ಸೆಲ್ಪಿ ಕ್ಲಿಕ್ಲಿಸಿಕೊಂಡು ಸಂತಸಪಡುತ್ತಿದ್ದಾರೆ.