ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ದಾಖಲೆ ಪ್ರಮಾಣದ ಹತ್ತಿ! - ಹಾವೇರಿ ಲೇಟೆಸ್ಟ್​ ನ್ಯೂಸ್

ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಮೊದಲ ಬಾರಿಗೆ 4,590 ಹತ್ತಿ ಅಂಡಿಗೆಗಳು ಪೂರೈಕೆಯಾಗಿವೆ.

a-record-quantity-cotton-supply-to-ranebennur-apmc-market
ರಾಣೇಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ದಾಖಲೆ ಪ್ರಮಾಣದ ಹತ್ತಿ ಪೂರೈಕೆ

By

Published : Nov 2, 2020, 4:20 PM IST

ರಾಣೆಬೆನ್ನೂರು (ಹಾವೇರಿ):ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಅಧಿಕ ಪ್ರಮಾಣದ ಹತ್ತಿ ಪೂರೈಕೆಯಾಗಿದ್ದು, ಈ ಹಂಗಾಮಿನಲ್ಲಿ ಮೊದಲ ಬಾರಿಗೆ 4,590 ಹತ್ತಿ ಅಂಡಿಗೆಗಳು ಮಾರಾಟಕ್ಕೆ ಬಂದಿವೆ.

ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ದಾಖಲೆ ಪ್ರಮಾಣದ ಹತ್ತಿ
ಜಿಲ್ಲೆಯ ಹಿರೇಕೆರೂರು, ರಟ್ಟಿಹಳ್ಳಿ, ಗುತ್ತಲ, ರಾಣೆಬೆನ್ನೂರು ತಾಲೂಕಿನ ವಿವಿಧ ಭಾಗದಿಂದ ರೈತರು ಮಾರುಕಟ್ಟೆಗೆ ಹತ್ತಿಯನ್ನು ತಂದಿದ್ದಾರೆ. ರಾಣೆಬೆನ್ನೂರು ಎಪಿಎಂಸಿಗೆ ಕಳೆದ ಎಂಟು ವರ್ಷದ ಹಿಂದೆ 14 ಸಾವಿರ ಅಂಡಿಗೆ ಬಂದಿದ್ದು ದಾಖಲೆಯಾಗಿದೆ. ಈ ಬಾರಿ ಅಧಿಕ ಮಳೆಯ ನಡುವೆ ಜಿಲ್ಲೆಯ ರೈತರು ಹತ್ತಿ ಬೆಳೆದಿದ್ದಾರೆ. ಇದೇ ತಿಂಗಳು ದೀಪಾವಳಿ ಹಬ್ಬದ ಸಲುವಾಗಿ ರೈತರು ಹತ್ತಿಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಸದ್ಯ ಎಪಿಎಂಸಿ ಪ್ರಾಂಗಣದಲ್ಲಿ ಎಲ್ಲಿ ನೋಡಿದರೂ ಬಿಳಿ ಬಣ್ಣದ ಹತ್ತಿ ಅಂಡಿಗೆಗಳು ಕಾಣುತ್ತಿವೆ.


ಎಪಿಎಂಸಿ ಮಾರುಕಟ್ಟೆಯಲ್ಲಿ ಬಿಟಿ ಹತ್ತಿ ಕ್ವಿಂಟಾಲ್​ಗೆ 4,500-5,549 ಹಾಗೂ ಡಿಸಿಹೆಚ್‌ ಹತ್ತಿ 3,029-6,149 ರೂ.ನಂತೆ ಮಾರಾವಾಗಿದೆ. ಅಲ್ಲದೆ ಮೆಕ್ಕೆಜೋಳ, ಶೇಂಗಾ ಬೆಳೆಗೂ ಒಳ್ಳೆಯ ಬೆಲೆ ಬಂದಿದ್ದು, ರೈತರು ಮಾರುಕಟ್ಟೆಗೆ ಉತ್ಪನ್ನಗಳನ್ನು ತರುತ್ತಿದ್ದಾರೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ ತಿಳಿಸಿದ್ದಾರೆ.

ABOUT THE AUTHOR

...view details