ಕರ್ನಾಟಕ

karnataka

ETV Bharat / state

ಹಾನಗಲ್​: ಮರ ಕಡಿಯದಂತೆ ತಾಕೀತು ಮಾಡಿದ ಚಿಕ್ಕಪ್ಪನ ಕೊಲೆ - ಹಾನಗಲ್​ ಅಪರಾಧ ಸುದ್ದಿ

ಮರ ಕಡಿಯದಂತೆ ತಾಕೀತು ಮಾಡಿದ ವ್ಯಕ್ತಿಯನ್ನು ಆತನ ಸಂಬಂಧಿಕರೇ ಕೊಲೆ ಮಾಡಿದ ಘಟನೆ ಹಾನಗಲ್​ನಲ್ಲಿ ನಡೆದಿದೆ.

ಹಾನಗಲ್​ನಲ್ಲಿ ಕೊಲೆ
ಹಾನಗಲ್​ನಲ್ಲಿ ಕೊಲೆ

By

Published : Oct 19, 2020, 4:15 PM IST

ಹಾನಗಲ್ (ಹಾವೇರಿ): ತೇಗದ ಮರ ಕಡಿಯದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡು ಚಿಕ್ಕಪ್ಪನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.

ವಿರೂಪಾಕ್ಷಪ್ಪ ರಾಮಾಪುರ (55) ಮೃತ ವ್ಯಕ್ತಿ. ವಿರೂಪಾಕ್ಷಪ್ಪ ಜಮೀನಿಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬಸವರಾಜ ರಾಮಾಪುರ ಹಾಗೂ ಇತರರು ಹರಿತವಾದ ಆಯುಧದಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್ಐ ಆಂಜನೇಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details