ಕರ್ನಾಟಕ

karnataka

ETV Bharat / state

ಹಾವೇರಿ: ಹೆತ್ತಮ್ಮನ ಮೇಲೆಯೇ ಅತ್ಯಾಚಾರ, ಕೊಲೆ.. ಪಾಪಿ ಮಗ ಅರೆಸ್ಟ್​ - haveri news

ಹಾವೇರಿ ಜಿಲ್ಲೆಯನ್ನು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮಗನೇ ಹೆತ್ತಮ್ಮಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಎರಡು ದಿನಗಳ ಹಿಂದೆ ಈ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

A man killed his mother after raped in haveri
ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪಾಪಿ ಮಗ

By

Published : Nov 14, 2020, 11:40 PM IST

Updated : Nov 15, 2020, 6:57 AM IST

ಹಾವೇರಿ: ಪಾಪಿ ಮಗನೋರ್ವ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರವೆಸಗಿ ನಂತರ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ರಸ್ತೆಯಲ್ಲಿ ಜರುಗಿದೆ.

ಶಿವಪ್ಪ ಲಮಾಣಿ (21) ಎಂಬಾತನೆ ತಾಯಿಯನ್ನ ಹತ್ಯೆ ಮಾಡಿರುವ ಕಾಮುಕ ಪುತ್ರ. ನವೆಂಬರ್ 12, 2020ರಂದು ತಾಯಿಯನ್ನ ಗಂಗಿಬಾವಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಆಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಹತ್ಯೆ ಮಾಡಿ ಪರಾರಿ ಆಗಿದ್ದ ಎಂದು ತಿಳಿದುಬಂದಿದೆ.

ಮರುದಿನ ಮೃತದೇಹ ಪತ್ತೆಯಾಗಿ, ಪೊಲೀಸರು ಪ್ರಕರಣದ ಬೆನ್ನು ಬಿದ್ದಾಗ ಪುತ್ರನೇ ತಾಯಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಕಳೆದ ಆರು ವರ್ಷಗಳ ಹಿಂದೆ ಪತಿ ಮೃತಪಟ್ಟಿದ್ದ. ಮಗನೊಂದಿಗೆ ವಾಸವಾಗಿದ್ದ ಮಹಿಳೆ ಬೇರೊಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗ್ತಿದೆ. ಇದರಿಂದ ಕೋಪಗೊಂಡಿದ್ದ ಶಿವಪ್ಪ ತಾಯಿ ಮೇಲೆ ದುಷ್ಕೃತ್ಯವೆಸಗಿ ಕೊಂದಿದ್ದಾನೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 15, 2020, 6:57 AM IST

ABOUT THE AUTHOR

...view details