ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಹೆಜ್ಜೇನು ದಾಳಿಗೆ ಅಂಚೆ ಇಲಾಖೆ ನಿವೃತ್ತ ನೌಕರ ಬಲಿ - ಹಾವೇರಿಯಲ್ಲಿ ಹೆಜ್ಜೇನು ಕಡಿದು ಸಾವು

ಹಾವೇರಿ ಜಿಲ್ಲೆಯಲ್ಲಿ ಹೆಜ್ಜೇನು ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಹೆಜ್ಜೇನು ಕಡಿದು ಓರ್ವ ಸಾವು
ಹೆಜ್ಜೇನು ಕಡಿದು ಓರ್ವ ಸಾವು

By

Published : Jan 2, 2022, 8:35 PM IST

ಹಾವೇರಿ:ವಾಹನ ಪೂಜೆ ಮಾಡುವ ವೇಳೆ ಹೆಜ್ಜೇನು ಕಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಪ್ರಭಾಕರ ಅತ್ತಿಗೇರಿ (65) ಮೃತ ವ್ಯಕ್ತಿ.

ಎಳ್ಳ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ಕಾರು ತೊಳೆದು ಪೂಜೆ ಮಾಡುವಾಗ ಆಕಸ್ಮಿಕವಾಗಿ ಹೆಜ್ಜೇನು ದಾಳಿ ಮಾಡಿದ್ದವು. ಪರಿಣಾಮವಾಗಿ ಪ್ರಭಾಕರ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಮೃತರು ಅಂಚೆ ಇಲಾಖೆಯ ನಿವೃತ್ತ ನೌಕರರಾಗಿದ್ದು, ಪ್ರಸ್ತುತ ಖಾಸಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(ಇದನ್ನೂ ಓದಿ: Omicron scare: ನಾಳೆಯಿಂದ ಶಾಲಾ-ಕಾಲೇಜು, ಥಿಯೇಟರ್, ಸಲೂನ್ ಬಂದ್!)

ABOUT THE AUTHOR

...view details