ಹಾವೇರಿ: ಕೊರೊನಾದಿಂದ ಪತ್ನಿ ಸಾವನ್ನಪ್ಪಿದ್ದಕ್ಕೆ ಬೇಸತ್ತು ಪತಿಯೊರ್ವ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ 23 ವರ್ಷದ ಮಹಿಳೆ ಕೊರೊನಾದಿಂದ ಗುರುವಾರ ರಾತ್ರಿ ಸಾವನ್ನಪ್ಪಿದ್ದಳು.
ಕೊರೊನಾಗೆ ಪತ್ನಿ ಬಲಿ.. ಮನನೊಂದು ಆಸ್ಪತ್ರೆ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ - ಕೊರೊನಾ ಸುದ್ದಿ
ಕಳೆದ ಎರಡು ತಿಂಗಳ ಹಿಂದೆ ಮಗು ಅನಾರೋಗ್ಯಕ್ಕೆ ತುತ್ತಾಗಿ ಸಾವನಪ್ಪಿದ್ದರೆ, ಇತ್ತ ಪತ್ನಿ ಕೊರೊನಾಗೆ ಬಲಿಯಾಗಿದ್ದಾಳೆ. ಇದರಿಂದ ಮನನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ.
ಮನನೊಂದು ಆಸ್ಪತ್ರೆ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ
ಇದರಿಂದ ಬೇಸತ್ತ 30 ವರ್ಷದ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎರಡು ತಿಂಗಳ ಹಿಂದೆ ಜನಿಸಿದ್ದ ಮಗು ಸಹ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಮಗು ಮತ್ತು ಪತ್ನಿ ಇಬ್ಬರನ್ನ ಕಳೆದುಕೊಂಡ ಪತಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಸ್ವಸ್ಥ ಪತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.