ಹಾವೇರಿ: ಕಾಲು ಜಾರಿ ಕುಮದ್ವತಿ ನದಿಗೆ ಬಿದ್ದಿದ್ದ ಯುವತಿಯ ಶೋಧ ಕಾರ್ಯ ಮಂಗಳವಾರ ಸಹ ಮುಂದುವರೆದಿದೆ.
ಆಕಸ್ಮಿಕವಾಗಿ ಕುಮದ್ವತಿಗೆ ಬಿದ್ದ ಯುವತಿ: ಅಗ್ನಿಶಾಮಕ ದಳದಿಂದ ಶೋಧ ಕಾರ್ಯ - Haveri
ಅಗ್ನಿಶಾಮಕದಳ ಸಿಬ್ಬಂದಿ ಸ್ಥಳೀಯ ಈಜುಪಟುಗಳು ಯುವತಿಯ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಶೋಧಕಾರ್ಯ ಕೈಗೊಂಡ ಸಂದರ್ಭದಲ್ಲಿ ನೀರಿನ ಸೆಳೆತ ಹೆಚ್ಚಿದ್ದ ಹಿನ್ನೆಲೆಯಲ್ಲಿ ಅಡಚಣೆ ಉಂಟಾಗಿತ್ತು.
![ಆಕಸ್ಮಿಕವಾಗಿ ಕುಮದ್ವತಿಗೆ ಬಿದ್ದ ಯುವತಿ: ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಕುಮದ್ವತಿಗೆ ಬಿದ್ದ ಯುವತಿ](https://etvbharatimages.akamaized.net/etvbharat/prod-images/768-512-8463771-287-8463771-1597746280407.jpg)
ಕುಮದ್ವತಿಗೆ ಬಿದ್ದ ಯುವತಿ
ಅಗ್ನಿಶಾಮಕದಳ ಸಿಬ್ಬಂದಿ ಸ್ಥಳೀಯ ಈಜುಪಟುಗಳು ಯುವತಿಯ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಶೋಧಕಾರ್ಯ ಕೈಗೊಂಡ ಸಂದರ್ಭದಲ್ಲಿ ನೀರಿನ ಸೆಳೆತ ಹೆಚ್ಚಿದ್ದ ಹಿನ್ನೆಲೆಯಲ್ಲಿ ಅಡಚಣೆ ಉಂಟಾಗಿತ್ತು.
ಸೋಮವಾರ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿಯ ಕುಮದ್ವತಿ ನದಿಯಲ್ಲಿ ಶಶಿಕಲಾ ಎಂಬ ಯುವತಿ ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಳು.