ರಾಣೆಬೆನ್ನೂರು:ದೀಪಾವಳಿ ಹಬ್ಬದಲ್ಲಿ ಡಿಜೆ ಹಾಕುವ ಸಲುವಾಗಿ ಯುವಕರ ನಡುವೆ ನಡೆದ ಮಾರಾಮಾರಿಯಲ್ಲಿ ಹತ್ತು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಅಂಕಾಸಪುರ ತಾಂಡದಲ್ಲಿ ನಡೆದಿದೆ.
ಡಿಜೆ ಹಾಕುವ ಸಲುವಾಗಿ ಯುವಕರ ನಡುವೆ ಮಾರಾಮಾರಿ - ಹತ್ತು ಜನರಿಗೆ ಗಾಯ - Fight between youth for playing to DJ
ಯುವಕರ ನಡುವಿನ ಗಲಾಟೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಯಿಂದ 10 ಮಂದಿ ಗಾಯಗೊಂಡಿದ್ದರೆ, ಹಲ್ಲೆ ಮಾಡಿದ ಯುವಕರು ತೆಲೆಮರೆಸಿಕೊಂಡಿದ್ದಾರೆ.
ಮಾರಮಾರಿ
ದೀಪಾವಳಿ ಹಬ್ಬದ ಸಮಯದಲ್ಲಿ ಅಂಕಾಸಪುರ ಗ್ರಾಮದಲ್ಲಿ ಡಿಜೆ ಹಾಕಲಾಗಿತ್ತು. ಈ ಸಮಯದಲ್ಲಿ ಯುವಕರ ಗುಂಪೊಂದು ಕಿರಿಕ್ ಮಾಡಿದೆ. ಇದರಿಂದ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಈ ವೇಳೆ ಸುಮಾರು 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯುವಕರ ಗಲಾಟೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ ಯುವಕರು ತೆಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.