ETV Bharat Karnataka

ಕರ್ನಾಟಕ

karnataka

ETV Bharat / state

ಸೂಕ್ತ ಮಾರುಕಟ್ಟೆ ದೊರಕದೇ ಹೂವು ಬೆಳೆ ನಾಶ ಮಾಡಿದ ರೈತ - Lockdown Effect

ಲಾಕ್​​​​ಡೌನ್‌ನಿಂದಾಗಿ ಹೂವು ಮಾರಾಟ ಆಗದಿರೋದಕ್ಕೆ ಬೇಸತ್ತು ರೈತನೊಬ್ಬ ತಾನೇ ಟ್ರ್ಯಾಕ್ಟರ್ ನಿಂದ ಹೂವಿನ ಬೆಳೆ ನಾಶ ಮಾಡಿದ ಘಟನೆ ನಡೆದಿದೆ.

A farmer who destroyed flower crop for not having proper market
ಸೂಕ್ತ ಮಾರುಕಟ್ಟೆ ದೊರಕದೆ ಹೂವು ಬೆಳೆ ನಾಶ ಮಾಡಿದ ರೈತ
author img

By

Published : May 28, 2020, 5:59 PM IST

ಹಾವೇರಿ:ಕೊರೊನಾ ಲಾಕ್ ಡೌನ್‌ನಿಂದಾಗಿ ಹೂವು ಮಾರಾಟ ಆಗದಿರೋದಕ್ಕೆ ಬೇಸತ್ತು ರೈತನೋರ್ವ ತಾನೇ ಹೂವಿನ ಬೆಳೆ ನಾಶ ಮಾಡಿದ ಘಟನೆ ನಡೆದಿದೆ.

ಸೂಕ್ತ ಮಾರುಕಟ್ಟೆ ದೊರಕದೆ ಹೂವು ಬೆಳೆ ನಾಶ ಮಾಡಿದ ರೈತ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಭೋಗಾವಿ ಗ್ರಾಮದ ಮಲ್ಲೇಶಪ್ಪ ತೊಗರ್ಸಿ ಎಂಬ ರೈತ ಇಪ್ಪತ್ತೈದು ಗುಂಟೆ ಜಮೀನಿನಲ್ಲಿ ಸೇವಂತಿ ಹೂವು ಬೆಳೆದಿದ್ದ. ಹೂವು ಬೆಳೆಯಲು ಹದಿನೈದು ಸಾವಿರ ರುಪಾಯಿ ಖರ್ಚು ಮಾಡಿದ್ದ. ಆದ್ರೆ ಲಾಕ್ ಡೌನ್ ನಿಂದಾಗಿ ಹೂವು ಮಾರಾಟ ಆಗದೇ ಹಾಗೆ ಉಳಿದಿತ್ತು.

ಮತ್ತೊಂದೆಡೆ ಹೂವು ಬೆಳೆದು ಹಾನಿಗೊಳಗಾದ ರೈತರಿಗೆ ಪರಿಹಾರ ನೀಡೋದಾಗಿ ಸರಕಾರ ಘೋಷಿಸಿತ್ತು. ಆದ್ರೆ ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆ ಕಚೇರಿಗೆ ಅಲೆದಾಡಿದ್ರೂ ಸೂಕ್ತ ಸ್ಪಂದನೆ ಸಿಗದಿರೋದಕ್ಕೆ ಬೇಸತ್ತು ರೈತ ಮಲ್ಲೇಶಪ್ಪ ಟ್ರ್ಯಾಕ್ಟರ್ ನಿಂದ ಹೂವಿನ ಬೆಳೆ ನಾಶ ಮಾಡಿದ್ದಾನೆ.

ABOUT THE AUTHOR

...view details