ಹಾವೇರಿ: ಲಾಕ್ಡೌನ್ನಿಂದಾಗಿ ಉತ್ತಮ ದರ ಸಿಗದೆ ಬೇಸತ್ತು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ರೈತನೋರ್ವ ನಾಶಪಡಿಸಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಹಾವೇರಿ: ಉತ್ತಮ ದರ ಸಿಗದೆ ಬೇಸತ್ತು ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ! - ಮೆಣಸಿನಕಾಯಿ ಬೆಳೆ ನಾಶ ಪಡಿಸಿದ ರೈತ
ಉತ್ತಮ ದರ ಸಿಗದೆ ಬೇಸತ್ತು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ರೈತ ನಾಶಪಡಿಸಿದ್ದಾನೆ.
ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ
ಗ್ರಾಮದ ಬಸವಂತಪ್ಪ ಅಗಡಿ ಎಂಬ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ 1.5 ಲಕ್ಷ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದ. ಆದರೆ ಲಾಕ್ಡೌನ್ನಿಂದಾಗಿ ಮೆನಸಿಣಕಾಯಿ ದರ ಕ್ವಿಂಟಾಲ್ಗೆ ಕೇವಲ 800 ರೂಪಾಯಿಯಿಂದ 1000 ರೂಪಾಯಿಗೆ ಕುಸಿದಿತ್ತು. ಲಾಕ್ಡೌನ್ಗಿಂತಲೂ ಮೊದಲು ಮೆನಸಿಣಕಾಯಿ ದರ ಕ್ವಿಂಟಾಲ್ಗೆ 4000ರಿಂದ 10,000 ರೂಪಾಯಿವರೆಗೆ ಮಾರಾಟ ಆಗುತ್ತಿತ್ತು.
ಮುಂಬೈ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ಹೋಗುತ್ತಿತ್ತು. ಆದರೆ ಲಾಕ್ಡೌನ್ ನಂತರ ದರ ಕುಸಿದಿದ್ದರಿಂದ ಬೇಸತ್ತು ರೋಟರ್ ಹೊಡೆದು ರೈತ ಬಸವಂತಪ್ಪ ಬೆಳೆ ನಾಶ ಮಾಡಿದ್ದಾರೆ.