ಕರ್ನಾಟಕ

karnataka

ETV Bharat / state

ಫೇಸ್​​ಬುಕ್‌ನಲ್ಲಿ ಯುವತಿಯರ ಬಗ್ಗೆ ಅವಹೇಳನಕಾರಿ ಪೋಸ್ಟ್​​: ಯುವಕ ವಶಕ್ಕೆ - ಅವಹೇಳಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪೊಲೀಸರ ವಶಕ್ಕೆ

ಯುವತಿಯರ ಬಗ್ಗೆ ಅವಹೇಳಕಾರಿ ಪೋಸ್ಟ್ ಮಾಡಿದ ಹಾವೇರಿಯ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವಕ ವಶಕ್ಕೆ
ಯುವಕ ವಶಕ್ಕೆ

By

Published : Dec 1, 2019, 8:28 PM IST

ಹಾವೇರಿ: ಫೇಸ್​​ಬುಕ್‌ನಲ್ಲಿ ಯುವತಿಯರ ಬಗ್ಗೆ ಅವಹೇಳಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕೋಣತಿ ಗ್ರಾಮದ ಯುವಕ ಸಲೀಂ ಅಹಮದ್​ ಎಂಬಾತ ಯುವತಿಯರ ಬಗ್ಗೆ ಫೇಸ್​​ಬುಕ್​ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಮಾಡಿದ್ದ. ಈ ಬಗ್ಗೆ ಗ್ರಾಮಸ್ಥರು ಹಂಸಭಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಹಂಸಭಾವಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಬಗ್ಗೆ ಎಫ್​ಐಆರ್​ ದಾಖಲಾಗಿಲ್ಲ.

ಯುವತಿಯರ ಬಗ್ಗೆ ಅವಹೇಳನಕಾರಿ ಪೋಸ್ಟ್​​: ಯುವಕ ವಶಕ್ಕೆ

ABOUT THE AUTHOR

...view details