ಕರ್ನಾಟಕ

karnataka

ETV Bharat / state

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರದಲ್ಲಿ ಒಂದು ದಿನ ಮಾತ್ರ ವ್ಯಾಪಾರ ವಹಿವಾಟು

ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಮವಾರ ಮಾತ್ರ ವ್ಯಾಪಾರ ನಡೆಸಲು ವರ್ತಕರು ನಿರ್ಧರಿಸಿದ್ದಾರೆ. ಕಳೆದ ಬಾರಿ ಸರ್ಕಾರ ಲಾಕ್‌ಡೌನ್ ಮಾಡಿತ್ತು. ಇದರಿಂದ ಮಾರುಕಟ್ಟೆಯನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು.

a day-a-week business in the Badagi chili market
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರದಲ್ಲಿ ಒಂದು ದಿನ ವ್ಯಾಪಾರ ವಹಿವಾಟು

By

Published : Apr 23, 2021, 6:52 AM IST

ಹಾವೇರಿ: ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಇದೀಗ ಕೊರೊನಾ ಕರಿನೆರಳು ಬಿದ್ದಿದೆ. ವಾರದಲ್ಲಿ ಎರಡು ದಿನ ನಡೆಯುತ್ತಿದ್ದ ವ್ಯಾಪಾರವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರದಲ್ಲಿ ಒಂದು ದಿನ ವ್ಯಾಪಾರ ವಹಿವಾಟು

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಮತ್ತು ಗುರುವಾರ ವ್ಯಾಪರ ನಡೆಯುತ್ತಿತ್ತು. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಮವಾರ ಮಾತ್ರ ವ್ಯಾಪಾರ ನಡೆಸಲು ವರ್ತಕರು ನಿರ್ಧರಿಸಿದ್ದಾರೆ. ಕಳೆದ ಬಾರಿ ಸರ್ಕಾರ ಲಾಕ್‌ಡೌನ್ ಮಾಡಿತ್ತು. ಇದರಿಂದ ಮಾರುಕಟ್ಟೆಯನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು. ಪ್ರಸ್ತುತ ಕೊರೊನಾ ಹೆಚ್ಚಾಗುತ್ತಿರು ಕಾರಣ ಮಾರುಕಟ್ಟೆಯ ವ್ಯಾಪಾರವನ್ನ ಸೋಮವಾರ ಮಾತ್ರ ನಡೆಸಲಾಗುತ್ತದೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಸಾವಿರಾರು ರೈತರು ಆಗಮಿಸುತ್ತಾರೆ. ಅಲ್ಲದೆ ಮಾರುಕಟ್ಟೆಯಲ್ಲಿ ಮಹಿಳೆಯರು, ಹಮಾಲರು ಸೇರಿದಂತೆ ದಿನಕ್ಕೆ ಹತ್ತಾರು ಸಾವಿರ ಜನ ಸೇರುತ್ತಾರೆ. ಇವರೆಲ್ಲರ ಆರೋಗ್ಯದ ದೃಷ್ಠಿಯಿಂದ ವರ್ತಕರು ಈ ನಿರ್ಧಾರ ಮಾಡಿದ್ದಾರೆ. ಕೊರೊನಾ ಹೆಚ್ಚಾದರೆ ಮಾರುಕಟ್ಟೆ ಪೂರ್ಣ ಬಂದ್ ಮಾಡಲು ಸಹ ವರ್ತಕರು ಚಿಂತನೆ ನಡೆಸಿದ್ದಾರೆ.

ಓದಿ : ಪ್ರಜ್ಞೆ ತಪ್ಪಿ ಬಿದ್ದು 5 ತಿಂಗಳ ಗರ್ಭಿಣಿ ಸಾವು: ತಾಯಿಯ ಮೃತದೇಹದ ಬಳಿ ಆಟವಾಡಿದ ಮುಗ್ಧ ಕಂದಮ್ಮ!

ABOUT THE AUTHOR

...view details