ಕರ್ನಾಟಕ

karnataka

ETV Bharat / state

ಹಾವೇರಿಗೂ ವಕ್ಕರಿಸಿದ ಕೊರೊನಾ.. ಗ್ರೀನ್‌​​ನಿಂದ ಆರೇಂಜ್​​ ಝೋನ್​ಗೆ ಏಲಕ್ಕಿನಗರಿ.. - A Corona Positive Case Detected

ಸೋಂಕಿತನ ಮನೆಯಲ್ಲಿ 11 ಸದಸ್ಯರಿದ್ದಾರೆ. ಈಗಾಗಲೇ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 10 ಜನರನ್ನ ಕ್ವಾರಂಟೈನ್​ಗೊಳಪಡಿಸಲಾಗಿದೆ. ಅಲ್ಲದೇ 21 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

A Corona Positive Case Detected in Haveri District
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ

By

Published : May 4, 2020, 2:19 PM IST

ಹಾವೇರಿ: ಇಷ್ಟು ದಿನ ಒಂದೂ ಕೊರೊನಾ ಪ್ರಕರಣಗಳಿರದೇ ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆ ಇದೀಗ ಆರೇಂಜ್ ವಲಯಕ್ಕೆ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಒಂದು ಪಾಸಿಟಿವ್​ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿರುವುದನ್ನ ಖಚಿತಪಡಿಸಿದ್ದಾರೆ. ಸವಣೂರು ಮೂಲದ ವ್ಯಕ್ತಿ ಪಿ-639ಗೆ ಕೊರೊನಾ ಇರುವುದು ಖಚಿತವಾಗಿದೆ.

ಮುಂಬೈಯಿಂದ ಸವಣೂರಿಗೆ ಮೂವರು ಏಪ್ರಿಲ್​​ 28ರಂದು ಆಗಮಿಸಿದ್ದರು. ಅವರ ಮೂವರ ಗಂಟಲು ದ್ರವವನ್ನ 29ರಂದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಮೂವರಲ್ಲಿ ಅಣ್ಣ(42) ತಮ್ಮ(32) ಅಣ್ಣನ ಮಗ (19)ಮೂವರು ಸವಣೂರಿಗೆ ಆಗಮಿಸಿದ್ದರು. ಅದರಲ್ಲಿ 32 ವರ್ಷದ ತಮ್ಮನಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ. ಇನ್ನಿಬ್ಬರ ಲ್ಯಾಬ್ ರಿಪೋರ್ಟ್‌ ಸಂಜೆ ಬರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಸೋಂಕಿತ ವ್ಯಕ್ತಿ ಆಗಮಿಸಿದ್ದ ಪ್ರದೇಶದಲ್ಲಿ 394 ಮನೆಗಳಿವೆ, 1789 ಜನಸಂಖ್ಯೆ ಇದೆ. ಈ ಪ್ರದೇಶವನ್ನ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಸೋಂಕು ಕಾಣಿಸಿಕೊಂಡ ಒಂದು ಕಿ.ಮೀ ದೂರ ಸುತ್ತಳತೆಯಲ್ಲಿ ಕಂಟೋನ್ಮೆಂಟ್ ವಲಯ ಹಾಗೂ ಐದು ಕಿಮೀ ಸುತ್ತಳತೆಯಲ್ಲಿ ಬಪರ್ ಝೋನ್ ಎಂದು ಗುರುತಿಸಲಾಗಿದ್ದು, ಕಟ್ಟಿನಿಟ್ಟಿನ ಕ್ರಮಕೈಗೊಳ್ಳಲಾಗಿದ ಎಂದರು.

ಸೋಂಕಿತನ ಮನೆಯಲ್ಲಿ 11 ಸದಸ್ಯರಿದ್ದಾರೆ. ಈಗಾಗಲೇ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 10 ಜನರನ್ನ ಕ್ವಾರಂಟೈನ್​ಗೊಳಪಡಿಸಲಾಗಿದೆ. ಅಲ್ಲದೇ 21 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details