ಹಾವೇರಿ :ಮುಳ್ಳಿನ ಕಂಟೆಯಲ್ಲಿದ್ದ ಗುಬ್ಬಚ್ಚಿ ಗೂಡಿಗೆ ನಾಗರಹಾವೊಂದು ನುಗ್ಗಿ ಮರಿಗಳನ್ನು ತಿಂದಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕುಡಪಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗುಬ್ಬಚ್ಚಿ ಗೂಡಿಗೆ ದಾಳಿ ಮಾಡಿ ಮರಿಗಳನ್ನು ತಿಂದ ನಾಗರಹಾವು : ವಿಡಿಯೋ ವೈರಲ್ - ಗುಬ್ಬಚ್ಚಿ ಗೂಡಿಗೆ ದಾಳಿ ಮಾಡಿದ ನಾಗರಹಾವು
ಇವುಗಳ ಮೇಲೆ ನಾಗರ ಹಾವೊಂದು ದಾಳಿ ನಡೆಸಿ ಗೂಡಿನಲ್ಲಿದ್ದ ಮರಿಗಳನ್ನು ನುಂಗಿದೆ..
ಗುಬ್ಬಚ್ಚಿ ಗೂಡಿಗೆ ನಾಗರಹಾವು ದಾಳಿ
ಕುಡಪಲಿ ಗ್ರಾಮದ ಹೊರವಲಯದಲ್ಲಿರುವ ಮರಡಿ ತಿಮ್ಮಪ್ಪ ದೇವಸ್ಥಾನದ ಬಳಿ ಇರುವ ಮುಳ್ಳಿನಕಂಟೆಯಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿವೆ. ಇವುಗಳ ಮೇಲೆ ನಾಗರ ಹಾವೊಂದು ದಾಳಿ ನಡೆಸಿ ಗೂಡಿನಲ್ಲಿದ್ದ ಮರಿಗಳನ್ನು ನುಂಗಿದೆ. ಈ ದೃಶ್ಯವನ್ನು ಗ್ರಾಮದ ಶಂಕ್ರಪ್ಪ ಶಿರಗಂಬಿ ಎಂಬುವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಡಿದ್ದು, ಈ ವಿಡಿಯೋ ವೈರಲ್ ಆಗಿದೆ.