ಹಾವೇರಿ:ಜಿಲ್ಲೆಯಲ್ಲಿ ಸುರಿಯುತ್ತಿರುವ ಭೀಕರ ಮಳೆ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಕಾಲು ಜಾರಿ ಕಾಲುವೆಗೆ ಬಿದ್ದಿದ್ದ ಬಾಲಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ.
ಮಳೆಯ ರೌದ್ರಾವತಾರ: ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ - A Boy washed away in the canal in hirekeruru
ಹಾವೇರಿ ಜಿಲ್ಲೆಯಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಬಾಲಕನೋರ್ವ ಕಾಲು ಜಾರಿ ಕಾಲುವೆಗೆ ಬಿದ್ದು, ಕೊಚ್ಚಿ ಹೋಗಿದ್ದಾನೆ.
![ಮಳೆಯ ರೌದ್ರಾವತಾರ: ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ](https://etvbharatimages.akamaized.net/etvbharat/prod-images/768-512-4819076-thumbnail-3x2-vicky.jpg)
ಕೊಚ್ಚಿ ಹೋದ ಬಾಲಕಕೊಚ್ಚಿ ಹೋದ ಬಾಲಕ
ಸೋಯೆಬ್ ರಾಣೆಬೆನ್ನೂರು(14) ನೀರಲ್ಲಿ ಕೊಚ್ಚಿಹೋದ ಬಾಲಕ. ದುರ್ಗಾದೇವಿ ಕೆರೆಗೆ ಹೋಗುವ ಕಾಲುವೆ ನೀರಿನಲ್ಲಿ ಬಾಲಕ ಕೊಚ್ಚಿ ಹೋಗಿದ್ದಾನೆ. ಭಾರಿ ಮಳೆಯಿಂದ ಕೆರೆಗೆ ಹರಿಯುತ್ತಿರುವ ನೀರನ್ನು ನೋಡಲು ನಿಂತಿದ್ದ ವೇಳೆ ಕಾಲುವೆಗೆ ಕಾಲು ಜಾರಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕೊಚ್ಚಿ ಹೋದ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿರುವ ಸ್ಥಳೀಯರು
ಬಾಲಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಶೋಧಕಾರ್ಯ ನಡೆಸಿದ್ದಾರೆ. ಹಿರೇಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.