ರಾಣೆಬೆನ್ನೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹಂಚಿನ ಫ್ಯಾಕ್ಟರಿ ಬಳಿ ನಡೆದಿದೆ.
ಬೈಕ್ಗೆ ಡಿಕ್ಕಿ ಹೊಡೆದ ಬಿಜೆಪಿ ಮುಖಂಡನ ಕಾರು: ಬೈಕ್ ಸವಾರ ಸಾವು - ranebennuru accident news
ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ ಎಂಬುವರ ಕಾರು ಬೈಕ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೈಕ್ ಸವಾರ ಸಾವು
ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಗ್ರಾಮದ ಶಂಕರಗೌಡ ಮಲ್ಲನಗೌಡ ಪಾಟೀಲ (45) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ವೃತ್ತಿಯಲ್ಲಿ ಎಲ್ಐಸಿ ಏಜೆಂಟ್ ಆಗಿದ್ದ ಶಂಕರಗೌಡ ಸಂಬಂಧಿಕರ ಮದುವೆ ಆಮಂತ್ರಣ ಪತ್ರಿಕೆ ನೀಡಲು ಎಲ್ಐಸಿ ಕಚೇರಿಗೆ ಹೋಗಿದ್ದಾರೆ. ಕೊಟ್ಟು ವಾಪಸ್ ಆಗುವ ಸಮಯದಲ್ಲಿ ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ ಎಂಬುವರ ಕಾರು ಗುದ್ದಿದೆ. ಇದರಿಂದ ಬೈಕ್ ಸವಾರ ಶಂಕರಗೌಡ ಮಲ್ಲನಗೌಡ ಪಾಟೀಲ ಕಾರಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ರಾಣೆಬೆನ್ನೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.