ಹಾವೇರಿ: ಇಂದು ನಾಗ ಚತುರ್ಥಿ. ನಾಗನಿಗೆ ಹಾಲೆರೆಯಲು ಜನ ಗುಂಪುಗೂಡುತ್ತಾರೆ ಎಂದು ನಾಗಪ್ಪನ ಮೂರ್ತಿ ಇರುವ ಕಟ್ಟೆಯ ಸುತ್ತ ಕಟ್ಟಿಗೆ ಬ್ಯಾರಿಕೇಡ್ ಕಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಹಾವೇರಿಯಲ್ಲಿ ನಾಗರಕಟ್ಟೆ ಸುತ್ತ ಕಟ್ಟಿಗೆ ಬ್ಯಾರಿಕೇಡ್..! - A barricade of wood around the cobra stone in Haveri ..!
ಕೊರೊನಾ ಎಫೆಕ್ಟ್ ನಾಗಪ್ಪನಿಗೂ ತಗುಲಿದ್ದು, ಹಾವೇರಿಯಲ್ಲಿ ನಾಗಪ್ಪನ ಮೂರ್ತಿಯ ಸುತ್ತ ಕಟ್ಟಿಗೆ ಬ್ಯಾರಿಕೇಡ್ ಕಟ್ಟಲಾಗಿದೆ.
![ಹಾವೇರಿಯಲ್ಲಿ ನಾಗರಕಟ್ಟೆ ಸುತ್ತ ಕಟ್ಟಿಗೆ ಬ್ಯಾರಿಕೇಡ್..! dsdd](https://etvbharatimages.akamaized.net/etvbharat/prod-images/768-512-8156926-thumbnail-3x2-vish.jpg)
ಹಾವೇರಿಯಲ್ಲಿ ನಾಗರ ಕಲ್ಲಿನ ಸುತ್ತ ಕಟ್ಟಿಗೆ ಬ್ಯಾರಿಕೇಡ್
ಹಾವೇರಿಯಲ್ಲಿ ನಾಗರ ಕಲ್ಲಿನ ಸುತ್ತ ಕಟ್ಟಿಗೆ ಬ್ಯಾರಿಕೇಡ್
ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ನಾಗಪ್ಪ ಮೂರ್ತಿಯ ಸುತ್ತಲೂ ಉದ್ದದ ಕಟ್ಟಿಗೆ ಕಟ್ಟಿದೆ ಆಡಳಿತ ಮಂಡಳಿ. ದೂರದಲ್ಲಿ ನಿಂತು ಭಕ್ತರಿಗೆ ನಾಗಪ್ಪನ ದರ್ಶನ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ.
ಪ್ರತಿ ವರ್ಷ ನಾಗಪ್ಪನಿಗೆ ಹಾಲೆರೆದು ಬರುತ್ತಿದ್ದ ಭಕ್ತರು, ಈ ಬಾರಿ ಬೇರೆ ನಾಗಬನಗಳಿಗೆ ತೆರಳಿ ಹಾಲೆರೆದು ಪೂಜೆ ಸಲ್ಲಿಸಿ ಹಬ್ಬ ಆಚರಿಸಿದ್ದಾರೆ.