ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸ್ಥಳ ಪರಿಶೀಲನೆ ಮಾಡಿದ ಪರಿಷತ್ ಅಧ್ಯಕ್ಷ - Manu Baligar

ಎರಡು ಹೆದ್ದಾರಿಗಳಿಗೆ ಸಮೀಪವಿರುವ ಜಾಗ ಸೂಕ್ತವಾಗಿದೆ. ಇಲ್ಲಿಯೇ ಪ್ರಧಾನ ವೇದಿಕೆ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ಪಕ್ಕದಲ್ಲಿರುವ ನೊಳಂಬ ಭವನದಲ್ಲಿ ಸಮಾನಂತರ ವೇದಿಕೆ ಸೇರಿ ಇನ್ನೊಂದೆಡೆ ಸಮಾನಂತರ ವೇದಿಕೆ ನಿರ್ಮಿಸಲಾಗುವುದು..

86th Kannada Literary Conference in Haveri
ಸ್ಥಳ ಪರಿಶೀಲನೆ ಮಾಡಿದ ಪರಿಷತ್ ಅಧ್ಯಕ್ಕ ಡಾ.ಮನು ಬಳಿಗಾರ್

By

Published : Dec 19, 2020, 2:01 PM IST

ಹಾವೇರಿ :2021ರ ಫೆ.26, 27, 28 ರಂದು ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. 86ನೇ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ಪರಿಶೀಲನೆಯನ್ನ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ನಡೆಸಿದರು.

ನಗರದ ಟಿಎಂಎಇ ವಿದ್ಯಾ ಸಂಸ್ಥೆ ಪಕ್ಕದಲ್ಲಿರುವ ಸುಮಾರು 26 ಎಕರೆ ವಿಶಾಲವಾದ ಜಾಗದಲ್ಲಿ ಸಮ್ಮೇಳನ ನಡೆಸುವ ಕುರಿತಂತೆ ನಿರ್ಧರಿಸಲಾಯಿತು. ಈ ಸಂದರ್ಭ ಮಾತನಾಡಿದ ಮನು ಬಳಿಗಾರ್, ಎರಡು ಹೆದ್ದಾರಿಗಳಿಗೆ ಸಮೀಪವಾಗಿರುವ ಜಾಗ ಸೂಕ್ತವಾಗಿದೆ. ಇಲ್ಲಿಯೇ ಪ್ರಧಾನ ವೇದಿಕೆ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು.

ಸ್ಥಳ ಪರಿಶೀಲನೆ ಮಾಡಿದ ಪರಿಷತ್ ಅಧ್ಯಕ್ಕ ಡಾ.ಮನು ಬಳಿಗಾರ್

ಅಲ್ಲದೆ ಪಕ್ಕದಲ್ಲಿರುವ ನೊಳಂಬ ಭವನದಲ್ಲಿ ಸಮಾನಂತರ ವೇದಿಕೆ ಸೇರಿದಂತೆ ಇನ್ನೊಂದು ಕಡೆ ಸಮಾನಂತರ ವೇದಿಕೆ ನಿರ್ಮಿಸುವುದಾಗಿ ತಿಳಿಸಿದರು. ಮೂರು ವೇದಿಕೆಗಳಲ್ಲಿ ಸಾಹಿತ್ಯ ಗೋಷ್ಠಿಗಳು ನಡೆಯಲು ಅನುಕೂಲವಾಗಲಿವೆ ಎಂದು ಮನು ಬಳಿಗಾರ್ ತಿಳಿಸಿದರು.

ಓದಿ: ಫೆ.26 ರಿಂದ ಹಾವೇರಿಯಲ್ಲಿ 3 ದಿನ ಕನ್ನಡ ಸಾಹಿತ್ಯ ಸಮ್ಮೇಳನ; ಸಚಿವ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ

ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಸೇರಿದಂತೆ ಸಾಹಿತಿಗಳು, ಕಸಾಪ ಸದಸ್ಯರು ಉಪಸ್ಥಿತರಿದ್ದರು.

ABOUT THE AUTHOR

...view details