ಹಾವೇರಿ: ಇಂದು ಜಿಲ್ಲೆಯಲ್ಲಿ 80 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾವೇರಿ ತಾಲೂಕಿನಲ್ಲಿ 23, ರಾಣೆಬೆನ್ನೂರು ತಾಲೂಕಿನಲ್ಲಿ 19 ಮತ್ತು ಹಿರೇಕೆರೂರು ತಾಲೂಕಿನಲ್ಲಿ 18 ಜನರಿಗೆ ಸೋಂಕು ತಗುಲಿದೆ.
ಹಾವೇರಿ: 80 ಜನರಲ್ಲಿ ಕೊರೊನಾ ದೃಢ, ಓರ್ವ ಸಾವು - Haveri Covid-19 latest news
ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,844ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಇಂದು 56 ವರ್ಷದ ವ್ಯಕ್ತಿ ಬಲಿಯಾಗಿದ್ದಾನೆ.
ಹಾವೇರಿ ಕೊರೊನಾ ವರದಿ
ಸವಣೂರು ತಾಲೂಕಿನಲ್ಲಿ 10, ಹಾನಗಲ್ ತಾಲೂಕಿನಲ್ಲಿ 4, ಬ್ಯಾಡಗಿ ಮತ್ತು ಶಿಗ್ಗಾಂವಿ ತಾಲೂಕಿನ ತಲಾ ಮೂವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,844ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಇಂದು 56 ವರ್ಷದ ವ್ಯಕ್ತಿ ಬಲಿಯಾಗಿದ್ದಾನೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಮೃತರ ಸಂಖ್ಯೆ 36ಕ್ಕೆ ಏರಿದೆ.