ಹಾವೇರಿ: ಜಿಲ್ಲೆಯಲ್ಲಿ ರವಿವಾರ 76 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,483 ಕ್ಕೇರಿದೆ.
ಹಾವೇರಿಯಲ್ಲಿಂದು ಸೋಂಕಿತರಿಗಿಂತ ಗುಣಮುಖರಾದರ ಸಂಖ್ಯೆ ಹೆಚ್ಚು - Haveri
ಹಾವೇರಿ ಜಿಲ್ಲೆಯಲ್ಲಿನ ಇಂದಿನ ಕೊರೊನಾ ಸೋಂಕಿತರು, ಗುಣಮುಖರಾದವರು ಹಾಗು ಮೃತಪಟ್ಟವರ ಕುರಿತ ಮಾಹಿತಿ ಇಲ್ಲಿದೆ.
ಹಾವೇರಿ
ಕೋವಿಡ್ ಆಸ್ಪತ್ರೆಗಳಿಂದ ರವಿವಾರ 95 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರಾಣೆಬೆನ್ನೂರು ತಾಲೂಕಿನಲ್ಲಿ 27, ಹಾವೇರಿ 14 ಶಿಗ್ಗಾವಿ 11 ಪ್ರಕರಣಗಳು ಪತ್ತೆಯಾಗಿವೆ. ಹಿರೇಕೆರೂರು ತಾಲೂಕಿನಲ್ಲಿ 10, ಹಾನಗಲ್ 8 ಸವಣೂರು 05 ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಹಾವೇರಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಿಶ್ರಾ
ರವಿವಾರ ಎರಡು ಸಾವು ಸಂಭವಿಸಿದೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 52 ಕ್ಕೇರಿದೆ. 384 ಜನ ಹೋಂ ಐಸೊಲೇಷನ್‌ನಲ್ಲಿದ್ದು 419 ಜನ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated : Aug 16, 2020, 8:48 PM IST