ಹಾವೇರಿ: ಜಿಲ್ಲಾದ್ಯಂತ 72 ನೇ ಗಣರಾಜ್ಯೋತ್ಸವವನ್ನ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು.
ಧ್ವಜಾರೋಹಣ ನಂತರ ತೆರೆದ ವಾಹನದಲ್ಲಿ ಪರೇಡ್ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಇನ್ನು ಈ ವೇಳೆ ಮಾತನಾಡಿದ ಸಚಿವ, "ಹಾವೇರಿ ಜಿಲ್ಲಾ ಉಸ್ತುವಾರಿ ನೀಡುವಂತೆ ಸಿಎಂ ಬಳಿ ಸಚಿವ ಆರ್ ಶಂಕರ್ ಕೇಳಿದ್ದು ಸತ್ಯ. ಆದರೆ ಯಾರಿಗೆ ಯಾವ ಜಿಲ್ಲೆಗೆ ಉಸ್ತುವಾರಿ ನೀಡಬೇಕು ಎಂಬುದು ಸಿಎಂಗೆ ಬಿಟ್ಟ ವಿಚಾರ. ಈ ಕುರಿತಂತೆ ಸಿಎಂ ಯಾವುದೇ ತೀರ್ಮಾನ ಕೈಗೊಂಡರು ಅದಕ್ಕೆ ನಾವು ಬದ್ಧ" ಎಂದು ತಿಳಿಸಿದರು.