ಹಾವೇರಿ: ಜಿಲ್ಲೆಯಲ್ಲಿ ಬುಧವಾರ 71 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 1,513 ಕ್ಕೇರಿದೆ.
ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಹಾವೇರಿ ತಾಲೂಕಿನಲ್ಲಿ 27, ಸವಣೂರು ತಾಲೂಕಿನಲ್ಲಿ 11, ಶಿಗ್ಗಾವಿ ತಾಲೂಕಿನಲ್ಲಿ 10, ರಾಣೆಬೆನ್ನೂರು 09, ಹಾನಗಲ್ ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ತಲಾ 5 ಪ್ರಕರಣಗಳು, ಬ್ಯಾಡಗಿ ತಾಲೂಕಿನಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಇಂದು 150 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, ಇದುವರೆಗೂ 825 ಜನ ಗುಣಮುಖರಾಗಿದ್ದಾರೆ.
ಇಂದು ಎರಡು ಮರಣ ಪ್ರಕರಣಗಳು ಸಂಭವಿಸಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31 ಕ್ಕೇರಿದೆ. 79 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. 578 ಜನರಲ್ಲಿ ಕೊರೊನಾ ಸಕ್ರಿಯವಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ್ ತಿಳಿಸಿದ್ದಾರೆ.