ಹಾವೇರಿ: ಜಿಲ್ಲೆಯಲ್ಲಿ ಇಂದು 66 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 9,886 ಕ್ಕೆ ಏರಿಕೆಯಾಗಿದೆ.
ಹಾವೇರಿಯಲ್ಲಿಂದು 66 ಕೊರೊನಾ ಕೇಸ್ ಪತ್ತೆ: 139 ಜನ ಡಿಸ್ಚಾರ್ಜ್ - Haveri corona news update
ಹಾವೇರಿ ಜಿಲ್ಲೆಯಲ್ಲಿ ಇಂದು 139 ಜನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 66 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
Haveri
ಬ್ಯಾಡಗಿ ತಾಲೂಕಿನಲ್ಲಿ 06, ಹಿರೇಕೆರೂರು ಮತ್ತು ಶಿಗ್ಗಾವಿ ತಾಲೂಕುಗಳಲ್ಲಿ ತಲಾ 04, ಹಾನಗಲ್ ತಾಲೂಕಿ 07, ಹಾವೇರಿ 16, ರಾಣೆಬೆನ್ನೂರು 26 ಹಾಗು ಸವಣೂರು ತಾಲೂಕಿನಲ್ಲಿ 03 ಪ್ರಕರಣಗಳು ದೃಢಪಟ್ಟಿವೆ.
ಇಂದು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ 139 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮತ್ತು 466 ಜನರು ಹೋಂ ಐಸೋಲೇಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 158 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.