ಕರ್ನಾಟಕ

karnataka

ETV Bharat / state

ವರುಣನ ಆರ್ಭಟ: ರಾಣೆಬೆನ್ನೂರು ತಾಲೂಕಿನಲ್ಲಿ 6,200 ಹೆಕ್ಟೇರ್ ಬೆಳೆ ಹಾನಿ - ರಾಣೆಬೆನ್ನೂರು ಬೆಳೆ ಹಾನಿ

ರಾಣೆಬೆನ್ನೂರು ತಾಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೆರೆಕೊಡಿಗಳು ಭರ್ತಿಯಾಗಿ ಅಪಾರ ಬೆಳೆ ಜಲಾವೃತಗೊಂಡಿವೆ.

ಬೆಳೆ ಹಾನಿ

By

Published : Oct 23, 2019, 3:28 PM IST

Updated : Oct 23, 2019, 5:21 PM IST

ರಾಣೆಬೆನ್ನೂರು:ತಾಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೆರೆಕೊಡಿಗಳು ಭರ್ತಿಯಾಗಿವೆ. ಇದರಿಂದ ಸುತ್ತಮುತ್ತಲಿನ ಜಮೀನುಗಳಲ್ಲಿ ನೀರು ನುಗ್ಗಿ ಅಪಾರ ಬೆಳೆ ಜಲಾವೃತಗೊಂಡಿವೆ. ಇದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ತಾಲೂಕಿನಲ್ಲಿ ಮಳೆಯಿಂದ ಹಲವು ರಸ್ತೆಗಳು ಜಖಂಗೊಂಡಿದ್ದು, ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ತಾಲೂಕಿನಾದ್ಯಂತ ಸುಮಾರು 200 ಮನೆಗಳು ಬಿದ್ದಿದ್ದು, ಹಲವು ಜನ ನಿರಾಶ್ರಿತರಾಗಿದ್ದಾರೆ. ತಾಲೂಕಿನ ಮೇಡ್ಲೇರಿ ಯಕಲಾಸಪುರ, ಅಸುಂಡಿ, ಗುಡಗೂರು, ಕುದರಿಹಾಳ, ಆರೇಮಲ್ಲಾಪುರ ಗ್ರಾಮದಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಸೇರಿದಂತೆ ಲಕ್ಷಾಂತರ ರೂಗಳ ಬೆಳೆಗಳು ಹಾನಿಯಾಗಿವೆ.

ರಾಣೆಬೆನ್ನೂರು ತಾಲೂಕಿನಲ್ಲಿ 6,200 ಹೆಕ್ಟೇರ್ ಬೆಳೆ ಹಾನಿ

ಬೆಳೆಹಾನಿ ವಿವರ:ರಾಣೆಬೆನ್ನೂರು ತಾಲೂಕಿನಲ್ಲಿ ಸುಮಾರು 6,200 ಹೆಕ್ಟೇರ್ ಬೆಳೆ ನೀರಿನಿಂದ ಜಲಾವೃತಗೊಂಡಿವೆ. ಅವುಗಳಲ್ಲಿ 25 ಹೆಕ್ಟೇರ್ ಎಲೆಬಳ್ಳಿ, 10 ಹೆಕ್ಟೇರ್ ಅಡಿಕೆ, 20 ಹೆಕ್ಟೇರ್ ಪಪ್ಪಾಯಿ, 200 ಹೆಕ್ಟೇರ್ ಈರುಳ್ಳಿ, 10 ಹೆಕ್ಟೇರ್ ಬೆಳ್ಳುಳ್ಳಿ, 25 ಹೆಕ್ಟೇರ್ ಬಾಳೆ ಸೇರಿದಂತೆ ಸುಮಾರು 300 ಹೆಕ್ಟೇರ್ ಭತ್ತ ನೆಲಕಚ್ಚಿದೆ. ಇನ್ನುಳಿದ ಹತ್ತಿ ಮತ್ತು ಮೆಕ್ಕೆಜೋಳ ಹಾನಿಯಾಗಿದೆ ಎಂದು ವರದಿ ಮಾಡಲಾಗಿದೆ.

ಇನ್ನು ಸುಮಾರು 560 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈಗಾಗಲೇ ಬೆಳೆ ಹಾನಿ ಬಗ್ಗೆ ಮಾಹಿತಿ ಕಲೆ ತಹಸೀಲ್ದಾರ ಅವರಿಗೆ ಸಲ್ಲಿಸಲಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ ಸುಮಾರು 2500 ವಾಣಿಜ್ಯ ಬೆಳ ನಾಶವಾಗಿದೆ.

Last Updated : Oct 23, 2019, 5:21 PM IST

ABOUT THE AUTHOR

...view details