ರಾಣೆಬೆನ್ನೂರು(ಹಾವೇರಿ):ಜಿಲ್ಲೆಯಾದ್ಯಂತ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ರಾಣೆಬೆನ್ನೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಆರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ರಾಣೆಬೆನ್ನೂರು ತಾಲೂಕಿನ ನಿಟ್ಟೂರ ಗ್ರಾಮದ ವ್ಯಕ್ತಿ ಮತ್ತು ದೆವಗೊಂಡನಕಟ್ಟಿ ಗ್ರಾಮದ ಆಶಾ ಕಾರ್ಯಕರ್ತೆಗೆ ಸೋಂಕು ತಗುಲಿದೆ. ರಾಣೆಬೆನ್ನೂರಿನ ದೊಡ್ಡಪೇಟೆ ಮತ್ತು ಮಾರುತಿ ನಗರದಲ್ಲಿ ತಲಾ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.
ರಾಣೆಬೆನ್ನೂರಲ್ಲಿ ಇಂದು 6 ಮಂದಿಗೆ ತಗುಲಿದ ಕೊರೊನಾ - Ranebennuru haveri latest news
ಆರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೂರು ಕೊರೊನಾ ಪ್ರಕರಣಗಳಿಗೆ ಯಾವುದೇ ಸಂಪರ್ಕ ಮತ್ತು ಟ್ರಾವೆಲ್ ಹಿಸ್ಟರಿ ಇಲ್ಲದ ಕಾರಣ ಕೊರೊನಾ ಸೋಂಕು ಹೇಗೆ ಹರಡಿತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ranebennuru corona case
ಮೂರು ಕೊರೊನಾ ಪ್ರಕರಣಗಳಿಗೆ ಯಾವುದೇ ಸಂಪರ್ಕ ಮತ್ತು ಟ್ರಾವೆಲ್ ಹಿಸ್ಟರಿ ಇಲ್ಲದ ಕಾರಣ ಕೊರೊನಾ ಸೋಂಕು ಹೇಗೆ ಹರಡಿತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಕೊರೊನಾ ಪತ್ತೆಯಾದ ಹಿನ್ನೆಲೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಸೋಂಕಿತರ ಪ್ರದೇಶಕ್ಕೆ ಭೇಟಿ ನೀಡಿ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದಾರೆ.
Last Updated : Jul 10, 2020, 8:39 PM IST