ಹಾವೇರಿ: ಜಿಲ್ಲೆಯಲ್ಲಿ ರೈತರ ಜಮೀನಿನಲ್ಲಿರುವ ಬಣವೆಗಳಿಗೆ ಮತ್ತು ರಾಶಿ ಮಾಡಿದ ತೆನೆರಾಶಿಗಳಲ್ಲಿ ಅಗ್ನಿ ಅವಘಡಗಳು ಸಂಭಿಸಿವೆ. ಬೇರೆ ರೀತಿಯ ಅಗ್ನಿ ಅವಘಡಗಳು ಕಡಿಮೆ ಎಂದು ಹಾವೇರಿ ಅಗ್ನಿಶಾಮಕ ದಳದ ಅಧಿಕಾರಿ ಬಿ ವೈ ತುರನೂರ ತಿಳಿಸಿದ್ದಾರೆ.
ಹಾವೇರಿ ನಗರದ ಅಗ್ನಿಶಾಮಕ ದಳದ ಕಚೇರಿಯಲ್ಲಿ ಪ್ರಸ್ತುತ ವರ್ಷ 54 ಪ್ರಕರಣಗಳು ದಾಖಲಾಗಿವೆ. ರೈತರಿಗೆ ಸಂಬಂಧಿಸಿದ ಉತ್ಪನ್ನಗಳಲ್ಲಿಯೇ ಹೆಚ್ಚು ಬೆಂಕಿ ಹೊತ್ತಿರುವುದು ಇನ್ನೂ ಒಂದೇ ಒಂದು ಕಾರ್ಖಾನೆಯಲ್ಲಿ ಅಗ್ನಿಅವಘಡ ಪ್ರಕರಣ ನಡೆದಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.