ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಅಂತಿಮವಾಗಿ ಕಣದೊಳಗೆ 13 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್ಸಾತಿಗೆ ಕೊನೆಯ ದಿನವಾದ ಇಂದು 4 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಕಣದಲ್ಲಿ 13 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ.
ಹಾನಗಲ್ ಉಪಚುನಾವಣೆ.. ನಾಲ್ವರು ಕಣದಿಂದ ಹಿಂದಕ್ಕೆ.. ಅಂತಿಮ ಅಖಾಡಕ್ಕೆ 13 ಅಭ್ಯರ್ಥಿಗಳು.. - ಹಾನಗಲ್ ಉಪಚುನಾವಣೆ 13 ಜನ ಅಖಾಡದಲ್ಲಿ
ಈ ಮಧ್ಯೆ ಬಿಜೆಪಿಗೆ ತೀವ್ರ ಆತಂಕ ತಂದಿದ್ದ ಸಿ ಆರ್ ಬಳ್ಳಾರಿ ಮನವೊಲಿಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ಸಿ ಆರ್ ಬಳ್ಳಾರಿ ಬುಧವಾರ ನಾಮಪತ್ರ ವಾಪಸ್ ಪಡೆದಿದ್ದಾರೆ..
ಹಾನಗಲ್ ಉಪಚುನಾವಣೆ
ಬಿಜೆಪಿಯಿಂದ ಶಿವರಾಜ್ ಸಜ್ಜನ್, ಕಾಂಗ್ರೆಸ್ಸಿನಿಂದ ಶ್ರೀನಿವಾಸ ಮಾನೆ, ಜೆಡಿಎಸ್‌ನಿಂದ ನಿಯಾಜ್ ಶೇಖ್, ರೈತ ಪಕ್ಷ ಭಾರತದಿಂದ ಫಕ್ಕೀರಗೌಡ ಗಾಜಿಗೌಡ್ರ, ಲೋಕಶಕ್ತಿ ಪಕ್ಷದಿಂದ ಶಿವಕುಮಾರ್ ತಳವಾರ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದಿಂದ ಉಡಚಪ್ಪ ಉದ್ದನಗೌಡ್ರ ಸ್ಪರ್ಧೆಯಲ್ಲಿದ್ದಾರೆ. ಇನ್ನೂ ಏಳು ಪಕ್ಷೇತರರು ಕಣದಲ್ಲಿದ್ದಾರೆ.
ಈ ಮಧ್ಯೆ ಬಿಜೆಪಿಗೆ ತೀವ್ರ ಆತಂಕ ತಂದಿದ್ದ ಸಿ ಆರ್ ಬಳ್ಳಾರಿ ಮನವೊಲಿಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ಸಿ ಆರ್ ಬಳ್ಳಾರಿ ಬುಧವಾರ ನಾಮಪತ್ರ ವಾಪಸ್ ಪಡೆದಿದ್ದಾರೆ.
Last Updated : Oct 13, 2021, 10:08 PM IST