ಹಾವೇರಿಯಲ್ಲಿ 39 ನೇ ರೈತ ಹುತಾತ್ಮ ದಿನಾಚರಣೆ - undefined
ನಗರದಲ್ಲಿ 39 ನೇ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯ್ತು. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಹುತಾತ್ಮ ರೈತರಿಗೆ ಮೌನಾಚರಣೆ ಮೂಲಕ ಶಾಂತಿ ಕೋರಲಾಯ್ತು.
ರೈತ ಹುತಾತ್ಮ ದಿನಾಚರಣೆ
ಹಾವೇರಿ:ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಇರುವ ಹುತಾತ್ಮ ರೈತರ ವೀರಗಲ್ಲಿನ ಮುಂಭಾಗದಲ್ಲಿ ಸಮಾವೇಶ ನಡೆಸಲಾಯಿತು. ನಂತರ ರೈತರ ಸದ್ಯದ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕಂಡುಕೊಳ್ಳಬೇಕಾದ ಪರಿಹಾರಗಳ ಕುರಿತು ರೈತ ಮುಖಂಡರು ಮಾತನಾಡಿದರು.