ಹಾವೇರಿ : ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಈಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.
ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ ಕ್ವಿಂಟಾಲ್ಗೆ 36,999 ರೂಪಾಯಿ!
ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಆವಲಗಟ್ಟಾ ಗ್ರಾಮದ ಹನುಮರೆಡ್ಡಿ ಬೆಳೆದ ಮೆಣಸಿನಕಾಯಿ ಕ್ವಿಂಟಾಲ್ಗೆ ಬರೋಬ್ಬರಿ 36,999 ರೂಪಾಯಿ ದಾಖಲೆಯ ದರಕ್ಕೆ ಮಾರಾಟವಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಮೆಣಸಿನಕಾಯಿ ಎಂಬ ದಾಖಲೆ ಬರೆದಿದೆ.
ರೈತ ಹನುಮರೆಡ್ಡಿ ಸುಮಾರು 28 ಚೀಲ ಮೆಣಸಿನಕಾಯಿ ತಂದಿದ್ದು, 9 ಕ್ವಿಂಟಲ್ ತೂಕವಿದೆ. ಮಾರುಕಟ್ಟೆಯ ವಿ ಎ ಬಾಗೋಜಿ ದಲಾಲಿ ಅಂಗಡಿಯಲ್ಲಿ ಕಿಶೋರ್ ಅಂಡ್ ಕಂಪನಿ ಕ್ವಿಂಟಲ್ಗೆ 36,999 ರೂ. ನೀಡಿ ಮೆಣಸಿನಕಾಯಿ ಖರೀದಿಸಿದೆ.
ಓದಿ:ಮೇಲ್ಮನೆ ಮಲ್ಲಯುದ್ಧ.. ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಸಭಾಪತಿ
ಬ್ಯಾಡಗಿ ಡಬ್ಬ ಮೆಣಸಿನಕಾಯಿ ತಳಿ ಇದಾಗಿದ್ದು, ಸ್ವಚ್ಛತೆ, ಬಣ್ಣ, ಸ್ವಾದಿಷ್ಟ ರುಚಿಯ ಮೇಲೆ ಬೆಲೆ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಮಾರುಕಟ್ಟೆಗೆ ಅತಿ ಹೆಚ್ಚು ಬೆಲೆಯ ಮೆಣಸಿನಕಾಯಿ ತಂದಿದ್ದಕ್ಕೆ ರೈತ ಹನುಮರೆಡ್ಡಿಯನ್ನು ಮಾರುಕಟ್ಟೆ ಸಮಿತಿಯಿಂದ ಸನ್ಮಾನಿಸಲಾಯಿತು.