ಹಾವೇರಿ:ಜಿಲ್ಲೆಯಲ್ಲಿ ಶುಕ್ರವಾರ 56 ಜನರಿಗೆ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ 36 ಪ್ರಕರಣಗಳು ರಾಣೆಬೆನ್ನೂರು ತಾಲೂಕಿನಲ್ಲಿ ವರದಿಯಾಗಿವೆ.
36 ಸೋಂಕಿತರು ಒಂದೇ ಕುಟುಂಬದವರು ಎಂದ ಹಾವೇರಿ ಅಪರ ಜಿಲ್ಲಾಧಿಕಾರಿ - ಹಾವೇರಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ
ಅಪರ ಜಿಲ್ಲಾಧಿಕಾರಿ ನೀಡಿರುವ ಹೇಳಿಕೆಯಲ್ಲಿ, 36 ಸೋಂಕು ಪ್ರಕರಣಗಳು ಒಂದೇ ಕುಟುಂಬಕ್ಕೆ ಸೇರಿದವು ಎಂದಿದ್ದಾರೆ. ಆದ್ರೆ ಮದುವೆಗೆ ಬಂದ 36 ಜನರು ಒಂದೇ ಕುಟುಂಬದವಲ್ಲ, ಬದಲಿಗೆ ಅವರೆಲ್ಲಾ ಸಂಬಂಧಿಕರು ಎನ್ನಲಾಗಿದೆ.
![36 ಸೋಂಕಿತರು ಒಂದೇ ಕುಟುಂಬದವರು ಎಂದ ಹಾವೇರಿ ಅಪರ ಜಿಲ್ಲಾಧಿಕಾರಿ Haveri corona case](https://etvbharatimages.akamaized.net/etvbharat/prod-images/768-512-09:38:56:1595002136-kn-hvr-05-marriage-7202143-17072020211358-1707f-1595000638-342.jpg)
Haveri corona case
ಈ 36 ಪ್ರಕರಣಗಳ ಕುರಿತಂತೆ ಹಾವೇರಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸ ಒದಗಿಸಿದೆ. ಅಪರ ಜಿಲ್ಲಾಧಿಕಾರಿ ನೀಡಿರುವ ಹೇಳಿಕೆಯಲ್ಲಿ ಈ 36 ಪ್ರಕರಣಗಳು ಒಂದೇ ಕುಟುಂಬಕ್ಕೆ ಸೇರಿದವು ಎಂದಿದ್ದಾರೆ. ಆದ್ರೆ ಮದುವೆಗೆ ಬಂದ 36 ಜನರು ಒಂದೇ ಕುಟುಂಬದವರಲ್ಲ, ಬದಲಿಗೆ ಅವರೆಲ್ಲಾ ಸಂಬಂಧಿಕರು ಎನ್ನಲಾಗಿದೆ.
ಸೋಂಕಿತ ವ್ಯಕ್ತಿಯು ಮಗನ ಮದುವೆ ಮತ್ತು ಸತ್ಯನಾರಾಯಣ ಪೂಜೆ ಮಾಡಿಸಿದ್ದರು. ಅದರಲ್ಲಿ ಪಾಲ್ಗೊಂಡಿದ್ದ ಮೂವತ್ತಾರು ಜನರಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗಿದೆ.