ಕರ್ನಾಟಕ

karnataka

By

Published : Jul 17, 2019, 9:52 PM IST

ETV Bharat / state

ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಹಾವೇರಿಯಲ್ಲಿ 262 ಬಾಲ್ಯ ವಿವಾಹಗಳಿಗೆ ಬ್ರೇಕ್​​

ಹಾವೇರಿಯ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 262 ಬಾಲ್ಯ ವಿವಾಹಗಳನ್ನ ತಡೆದಿದೆ.

ಸಾಂದರ್ಭಿಕ ಚಿತ್ರ

ಹಾವೇರಿ: ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗುಗಳಲ್ಲಿ ಒಂದು. ಇಂತಹ ಪಿಡುಗನ್ನು ತಡೆಗಟ್ಟವಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತ ಶ್ರಮವಹಿಸುತ್ತಿವೆ.

ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಶ್ಲಾಘನೀಯ ಕಾರ್ಯ

ಇಲ್ಲಿನ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 262 ಬಾಲ್ಯ ವಿವಾಹಗಳನ್ನ ತಡೆದಿದೆ. ಬಡತನ, ಅನಕ್ಷರತೆ, ಪರಸ್ಪರ ಸಂಬಂಧ ಉಳಿಸಿಕೊಳ್ಳುವಿಕೆ ಸೇರಿದಂತೆ ಹಲವು ಕಾರಣಗಳಿಂದ ಬಾಲ್ಯ ವಿವಾಹಗಳು ನಡೆಯುತ್ತವೆ. ಆದರೆ ಯಾವುದೇ ಕಾರಣಗಳಿಂದ ಬಾಲ್ಯ ವಿವಾಹವಾದರೂ ಅದು ಅವೈಜ್ಞಾನಿಕವೇ ಎನ್ನುತ್ತಾರೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್.

ಮದುವೆಯಾಗುವ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷ ಕಡ್ಡಾಯವಾಗಿರಬೇಕು. ದೇಶ ಸಾಕಷ್ಟು ಆಧುನಿಕತೆ, ತಾಂತ್ರೀಕರಣಗೊಳ್ಳುತ್ತಿದೆ. ಆದರೂ ಸಹ ಬಾಲ್ಯ ವಿವಾಹ ಈಗಲೂ ದೊಡ್ಡ ಪಿಡುಗಾಗಿದೆ. ಕೇವಲ ಇದಕ್ಕೆ ಪ್ರೋತ್ಸಾಹ ನೀಡುವುದು ಮಾತ್ರ ಅಪರಾಧವಲ್ಲ. ಮದುವೆಗೆ ಅತಿಥಿಯಾಗಿ ಬರುವವರು, ಶಾಮಿಯಾನ ಹಾಕುವವರು ಸಹ ಆರೋಪಿಗಳಾಗುತ್ತಾರೆ ಎನ್ನುತ್ತಾರೆ ಚೈತನ್ಯ ಸಂಸ್ಥೆಯ ನಿರ್ದೇಶಕ ಮಜೀದ್.

For All Latest Updates

TAGGED:

ABOUT THE AUTHOR

...view details