ರಾಣೆಬೆನ್ನೂರು: ವಿಷಹಾರ ಸೇವಿಸಿ 25 ಕುರಿ ಮತ್ತು ಆಡುಗಳು ಸಾವನ್ನಪ್ಪಿದ ಘಟನೆ ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದಿದೆ.
ರಾಣೆಬೆನ್ನೂರು: ವಿಷಾಹಾರ ಸೇವಿಸಿ 25 ಕುರಿಗಳು ಸಾವು - ರಾಣೆಬೆನ್ನೂರ ವಿಷಕಾರಿ ಆಹಾರ ತಿಂದು ಕುರಿಗಳು ಸಾವುಸುದ್ದಿ
ಕುರಿಗಳು ಮೇಯಿಸಲು ಹೋಗಿದ್ದ ಸಮಯದಲ್ಲಿ ಕುರಿಗಳು ವಿಷಕಾರಿ ಆಹಾರ ಸೇವಿಸಿದ್ದವು ಎನ್ನಲಾಗಿದೆ. ಸಂಜೆ ವೇಳೆ ಕುರಿದೊಡ್ಡಿಗೆ ಬಂದಾಗ ಕುರಿಗಳು ಸಾವನ್ನಪ್ಪಿದ್ದು, ಸುಮಾರು ಮೂರು ಲಕ್ಷ ರೂ. ನಷ್ಟ ಉಂಟಾಗಿದೆ.
![ರಾಣೆಬೆನ್ನೂರು: ವಿಷಾಹಾರ ಸೇವಿಸಿ 25 ಕುರಿಗಳು ಸಾವು 25 ಕುರಿಗಳು ಸಾವು](https://etvbharatimages.akamaized.net/etvbharat/prod-images/768-512-7965339-356-7965339-1594349243232.jpg)
25 ಕುರಿಗಳು ಸಾವು
25 ಕುರಿಗಳು ಸಾವು
ದೇವರಗುಡ್ಡ ಗ್ರಾಮದ ಕುರಿಗಾಯಿ ನಿಂಗರಾಜ ಏಳುಕುರಿ ಎಂಬುವವರಿಗೆ ಸೇರಿದ ಕುರಿಗಳಾಗಿವೆ. ಎಂದಿನಂತೆ ಕುರಿಗಳನ್ನು ಮೇಯಿಸಲು ಹೋಗಿದ್ದ ಸಮಯದಲ್ಲಿ ವಿಷಕಾರಿ ಆಹಾರ ಸೇವಿಸಿವೆ. ಸಂಜೆ ವೇಳೆ ಕುರಿದೊಡ್ಡಿಗೆ ಬಂದಾಗ ಕುರಿಗಳು ಸಾವನ್ನಪ್ಪಿದ್ದು, ಸುಮಾರು ಮೂರು ಲಕ್ಷ ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಪಶು ಇಲಾಖೆಯ ವೈದ್ಯರಾದ ಡಾ.ನೀಲಕಂಠ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರು ಕುರಿಗಳ ಸಾವಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.