ಹಾವೇರಿ :ಜಿಲ್ಲೆಯ ಜನರ ಬಹುದಿನಗಳಕನಸಾಗಿರುವ24x7 ಕುಡಿಯುವ ನೀರು ಸರಬರಾಜುಯೋಜನೆ ಇನ್ನೂ ನನಸಾಗಿಲ್ಲ.
ನಲ್ಲಿ ಇದ್ರೇನು ಪ್ರಯೋಜನ, ನೀರು ಬರಬೇಕಲ್ವೇ? 24X7 ಯೋಜನೆ ಹಾವೇರಿಗರಿಗೆ ಬರೀ ಕನಸು! - undefined
24 ಗಂಟೆ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ. ನೀರು ಪೂರೈಸಲು ಬೇಕಾಗಿರುವ ಪೈಪ್ಲೈನ್ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೂ ನಳದಲ್ಲಿ ನೀರು ಮಾತ್ರ ಬರುತ್ತಿಲ್ಲ.
![ನಲ್ಲಿ ಇದ್ರೇನು ಪ್ರಯೋಜನ, ನೀರು ಬರಬೇಕಲ್ವೇ? 24X7 ಯೋಜನೆ ಹಾವೇರಿಗರಿಗೆ ಬರೀ ಕನಸು!](https://etvbharatimages.akamaized.net/etvbharat/prod-images/768-512-3219610-thumbnail-3x2-hvr.jpg)
24 ಗಂಟೆ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ. ನೀರು ಪೂರೈಸಲು ಬೇಕಾಗಿರುವ ಪೈಪ್ಲೈನ್ ವ್ಯವಸ್ಥೆ ಕೂಡ ಮಾಡಲಾಗಿದೆ.ಆದರೆ,ನಳದಲ್ಲಿ ನೀರು ಮಾತ್ರ ಬರುತ್ತಿಲ್ಲ. ದಿನದ 24 ಗಂಟೆ ಇರಲಿ, ವಾರದಲ್ಲಿ ಒಮ್ಮೆಯೂ ಸಹ ಕುಡಿಯುವ ನೀರು ಸಿಗುತ್ತಿಲ್ಲ.
ಇದಕ್ಕೆ ಕಾರಣ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ನಗರದ ಕೆಲವಡೆ 15ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಉಳಿದ ಕಡೆಗಳಲ್ಲಿ ನಳಗಳು ನೀರನ್ನೇ ಕಂಡಿಲ್ಲ. ಯೋಜನೆ ಕನಸು ಕಂಡಿದ್ದ ಜನರಿಗೆ ಇದೀಗ ನಿರಾಶೆ ಮೂಡಿದೆ. ನಮ್ಮ ನಲ್ಲಿಗೆ ಯಾವಾಗ ಕುಡಿಯುವ ನೀರು ಬರುತ್ತೆ ಅಂತಾ ಹಾವೇರಿ ಜನ ಎದುರು ನೋಡುವ ಸ್ಥಿತಿ ಸೃಷ್ಟಿಯಾಗಿದೆ.