ರಾಣೆಬೆನ್ನೂರು(ಹಾವೇರಿ): ಸುಮಾರು ಐದು ಲಕ್ಷ ಬೆಲೆಯ 23 ಟಗರುಗಳನ್ನು ಕಳ್ಳತನ ಮಾಡಿದ ಘಟನೆ ರಾಣೆಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ನಡೆದಿದೆ. ಟಗರುಗಳನ್ನು ಕದ್ದೊಯ್ದಿರುವುದಕ್ಕೆ ಮಾಲೀಕ ದಿಕ್ಕು ತೋಚದಂತಾಗಿದ್ದಾರೆ.
ರಾಣೆಬೆನ್ನೂರಲ್ಲಿ 5 ಲಕ್ಷ ಬೆಲೆಯ 23 ಟಗರುಗಳು ಕಳ್ಳತನ: ಮಾಲೀಕ ಕಂಗಾಲು - ranebennuru news
ರಾಣೆಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ 5 ಲಕ್ಷ ಮೌಲ್ಯದ ಸುಮಾರು 23 ಟಗರುಗಳನ್ನು ಖದೀಮರು ಹೊತ್ತೊಯ್ದಿದ್ದಾರೆ. ಇದರಿಂದ ಮಾಲೀಕ ಕಂಗಾಲಾಗಿದ್ದಾರೆ.

ಅಡವಿ ಆಂಜನೇಯ ಬಡಾವಣೆಯ ದಾದಾಪೀರ್ ದೊಡ್ಡಮನಿ ಎಂಬುವರ ಫಾರ್ಮ್ನಲ್ಲಿ ಗುರುವಾರ ಮಧ್ಯರಾತ್ರಿ ಟಗರುಗಳು ಕಳ್ಳತನವಾಗಿವೆ. ದಾದಾಪೀರ್ ಕಳೆದ ಒಂದೂವರೆ ವರ್ಷದಿಂದ ಅಡವಿ ಆಂಜನೇಯ ಬಡಾವಣೆಯಲ್ಲಿ ಟಗರಿನ ಫಾರ್ಮ್ ಮಾಡಿ ಟಗರು ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಸಹ 24 ಟಗರುಗಳನ್ನು ತಂದು ಸಾಕಿದ್ದರು.
ಈಗಾಗಲೇ ಟಗರುಗಳು ಮಾರಾಟ ಹಂತಕ್ಕೆ ಬೆಳೆದಿದ್ದವು. ಆದರೆ ಕಳ್ಳರು ಸಿಸಿಟಿವಿ ಮರೆಮಾಚಿ 23 ಟಗರುಗಳನ್ನು ಹೊತ್ತೊಯ್ದಿದ್ದಾರೆ. ಇದರಿಂದ ಸುಮಾರು ಐದು ಲಕ್ಷ ಕಳೆದುಕೊಂಡಂತಾಗಿದ್ದು, ಟಗರುಗಳನ್ನು ಕಳೆದುಕೊಂಡ ಮಾಲೀಕ ದಾದಾಪೀರ್ ಕಂಗಾಲಾಗಿದ್ದಾರೆ. ಕಳ್ಳತನ ಮಾಡಿದವರನ್ನು ಬಂಧಿಸಿ ನ್ಯಾಯ ಕೂಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.