ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಒಂದೇ ದಿನ 200 ಜನರಲ್ಲಿ ಕೊರೊನಾ ವೈರಸ್ ಸೋಂಕು - corona in Haveri

ಹಾವೇರಿ ಜಿಲ್ಲೆಯ ಏಳು ಕೊರೊನಾ ವಾರಿಯರ್ಸ್​ಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಮಂಗಳವಾರ 17 ಜನ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದುವರೆಗೆ ಒಟ್ಟು 675 ಸೋಂಕಿತರು ಚೇತರಿಕೆ ಕಂಡುಕೊಂಡಿದ್ದಾರೆ.

ಹಾವೇರಿ : ಒಂದೇ ದಿನ 200 ಜನರಲ್ಲಿ ಕೊರೊನಾ ದೃಢ
ಹಾವೇರಿ : ಒಂದೇ ದಿನ 200 ಜನರಲ್ಲಿ ಕೊರೊನಾ ದೃಢ

By

Published : Aug 4, 2020, 8:27 PM IST

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 200 ಜನರಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣನವರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣನವರ್

ಹಾವೇರಿ ತಾಲೂಕಿನಲ್ಲಿ 55, ಹಿರೇಕೆರೂರು ತಾಲೂಕಿನಲ್ಲಿ 51, ಹಾನಗಲ್ ತಾಲೂಕಿನಲ್ಲಿ 27, ರಾಣೆಬೆನ್ನೂರು ತಾಲೂಕಿನಲ್ಲಿ 24, ಸವಣೂರು ತಾಲೂಕಿನಲ್ಲಿ 17, ಶಿಗ್ಗಾವಿ ತಾಲೂಕಿನಲ್ಲಿ 15, ಬ್ಯಾಡಗಿ ತಾಲೂಕಿನಲ್ಲಿ 11 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,442 ಕ್ಕೆ ಏಕೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದರಲ್ಲಿ ಏಳು ಮಂದಿ ಕೊರೊನಾ ವಾರಿಯರ್ಸ್‌ಗೆ​ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಮಂಗಳವಾರ 17 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 675 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 732 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details