ಕರ್ನಾಟಕ

karnataka

ETV Bharat / state

ಸಾಲಬಾಧೆ: ಒಂದೇ ಗ್ರಾಮದ ಇಬ್ಬರು ರೈತರು ನೇಣಿಗೆ ಶರಣು

ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.

2 farmers commit suicide
ಮಂಜಪ್ಪ ಬಸಪ್ಪ ಕರಿಯಪ್ಪನವರ ಮಹೇಶ ಬಸಪ್ಪ ಪರಸಳ್ಳಿ

By

Published : Nov 5, 2020, 10:36 AM IST

ರಾಣೆಬೆನ್ನೂರು:ಸಾಲಬಾಧೆಯಿಂದ ಒಂದೇ ದಿನ ಇಬ್ಬರು ರೈತರು ಸಾವಿನ ಮನೆ ಬಾಗಿಲು ತಟ್ಟಿದ್ದಾರೆ. ನಿಟ್ಟೂರು ಗ್ರಾಮದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಮಂಜಪ್ಪ ಬಸಪ್ಪ ಕರಿಯಪ್ಪನವರ(40) ಮತ್ತು ಮಹೇಶ ಬಸಪ್ಪ ಪರಸಳ್ಳಿ(38) ಆತ್ಮಹತ್ಯೆಗೆ ಶರಣಾದವರು. ರೈತ ಮಂಜಪ್ಪ ಬ್ಯಾಂಕ್​ನಲ್ಲಿ 3 ಲಕ್ಷ ರೂ. ಹಾಗೂ ಇತರರೊಂದಿಗೆ 5 ಲಕ್ಷ ರೂ. ಸಾಲ‌ ಪಡೆದಿದ್ದ. ಹಾಗೇ ರೈತ ಮಹೇಶ ಕೂಡ ಬ್ಯಾಂಕ್​ನಲ್ಲಿ 2 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗ್ತಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬೆಳೆ ನಷ್ಟವಾದ ಕಾರಣ ಸಾಲದ ಒತ್ತಡದಿಂದ ಈ ಇಬ್ಬರು ರೈತರು ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details